ಮಸೀದಿಗಳು ಸಾಮಾಜಿಕ ಕೇಂದ್ರಗಳಾಗಲಿ: ಅಕ್ಬರ್ ಅಲಿ

Update: 2017-12-11 15:01 GMT

ಉಡುಪಿ, ಡಿ.11: ಮಸೀದಿಗಳು ಪ್ರವಾದಿ ಕಾಲದಂತೆ ಸಾಮಾಜಿಕ ಕೇಂದ್ರಗಳಾಗಬೇಕು. ಇಂದಿನ ಅಗತ್ಯಗಳಾದ ಸಮಾಲೋಚನೆ, ವ್ಯಾಜ್ಯ ಇತ್ಯರ್ಥ ಕೆಲಸಗಳು ಮಸೀದಿಯಲ್ಲಿ ನಡೆಯುವಂತಾಗಬೇಕು ಎಂದು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಸಂಚಾಲಕ ಅಕ್ಬರ್ ಅಲಿ ಹೇಳಿದ್ದಾರೆ.

 ಕರ್ನಾಟಕ ಮಸಾಜಿದ್ ಕೌನ್ಸಿಲ್ ಮತ್ತು ರಾಜ್ಯ ವಕ್ಫ್ ಮಂಡಳಿ ವತಿಯಿಂದ ಶನಿವಾರ ಉಡುಪಿಯ ದುರ್ಗಾ ಇಂಟರ್‌ನ್ಯಾಶನಲ್ ಹೊಟೇಲ್ ಸಭಾಂಗಣ ದಲ್ಲಿ ಆಯೋಜಿಸಲಾದ ಕರಾವಳಿ ಆಯ್ದ ಜಿಲ್ಲೆಗಳ ಮಸೀದಿ ಹೊಣೆಗಾರರ ಸಭೆಯಲ್ಲಿ ‘ಸಮಾಜದ ನಿರ್ಮಾಣದಲ್ಲಿ ಮಸೀದಿ ಹೊಣೆಗಾರರ ಪಾತ್ರ’ ಎಂಬ ವಿಷಯದ ಕುರಿತು ಅವರು ಮಾತನಾಡುತಿದ್ದರು.

ಮಸೀದಿಗಳು ಕೇವಲ ನಮಾಝ್ ನಿರ್ವಹಣೆಗೆ ಮಾತ್ರ ಸೀಮಿತವಾಗಿರದೆ ಎಲ್ಲರಿಗೂ ಮುಕ್ತವಾಗಿರಬೇಕು. ಇತರರನ್ನು ಕೂಡ ಮಸೀದಿಗೆ ಆಹ್ವಾನಿಸಿ, ಮಸೀದಿ ಹಾಗೂ ಅಝಾನ್ ಬಗ್ಗೆ ತಿಳಿಹೇಳಿಕೊಡಬೇಕು. ಖುತ್ಬಾಗಳು ಐಕ್ಯ, ಕೋಮು ಸೌಹಾರ್ದ ಮತ್ತು ಸಮಾಜ ನಿರ್ಮಾಣಕ್ಕೆ ಪ್ರೇರೇಪಿಸಬೇಕು ಎಂದು ಅವರು ತಿಳಿಸಿದರು.

‘ಪ್ರಸಕ್ತ ಪರಿಸ್ಥಿತಿಯಲ್ಲಿ ಮಸೀದಿಗಳ ರಕ್ಷಣೆ’ ವಿಷಯದ ಕುರಿತು ಮಾತನಾ ಡಿದ ವಕ್ಫ್ ಮಂಡಳಿಯ ಮುಜೀಬುಲ್ಲಾಹ್ ಝಫಾರಿ, ವಕ್ಫ್‌ಗೆ ಮುಸ್ಲಿಮೇತ ರರೂ ದತ್ತಿ ಕೊಟ್ಟಿದ್ದಾರೆ. ವಿದ್ಯಾರ್ಥಿಗಳಿಗೆ ಕೋಚಿಂಗ್ ಕ್ಲಾಸ್, ಸ್ತ್ರೀಯರಿಗೆ ಆರೋಗ್ಯ, ಮಕ್ಕಳ ಪಾಲನೆ ತರಬೇತಿ, ಉದ್ಯೋಗ ಮತ್ತು ಇತರ ಅಗತ್ಯ ವಿಷಯಗಳ ಕುರಿತು ಕಾರ್ಯಾಗಾರಗಳನ್ನು ಮಸೀದಿಗಳಲ್ಲಿ ಏರ್ಪಡಿಸಬೇಕು. ಮಸೀದಿಗಳ ನಿವೇಶನಗಳಲ್ಲಿ ವ್ಯಾಣಿಜ್ಯ ಸಂಕೀರ್ಣಗಳು ನಿರ್ಮಿಸುವ ಯೋಜನೆ ಗಳಿಗೆ ವಕ್ಫ್ ಮಂಡಳಿಯಿಂದ ಪ್ರೊೀತ್ಸಾಹ ನೀಡಲಾಗುವುದು ಎಂದರು.

ಮೌಲಾನಾ ಝುಬರ್ ನದ್ವಿ ಮಾತನಾಡಿ, ಮಸೀದಿಗಳಲ್ಲಿ ಕಲಿತವರು ಸಮಾಜಕ್ಕೆ ಮತ್ತು ರಾಷ್ಟ್ರಗಳಿಗೆ ಅಸಾಧಾರಣ ಸಾಧನೆ, ಕೊಡುಗೆಗಳನ್ನು ನೀಡಿದ್ದಾರೆ. ಖುತ್ಬಾಗಳ ಮೂಲಕ ಯುವಕರನ್ನು ಸಮಾಜದ ನಿರ್ಮಾಣಕ್ಕಾಗಿ ಪ್ರೇರೇಪಿಸುವ ಕೆಲಸ ಆಗಬೇಕು ಎಂದು ಹೇಳಿದರು.

ಮಾದರಿ ಮಸೀದಿ ಎಂಬ ವಿಷಯದ ಕುರಿತು ಮಂಗಳೂರು ಶಾಂತಿ ಪ್ರಕಾಶನದ ಸಈದ್ ಇಸ್ಮಾಯಿಲ್ ಮಾತನಾಡಿ, ಮಸೀದಿಗಳು ಪ್ರವಾದಿಯ ವರ ಕಾಲದಲ್ಲಿ ಸಮಾಜದ ಸರ್ವತೋಮುಖ ಅಭಿವೃದ್ಧಿಯ ಕೇಂದ್ರಗಳಾಗಿ ದ್ದುವು. ಅತ್ಯುತ್ತಮ ಸಮುದಾಯದ ಕರ್ತವ್ಯದಂತೆ ಸಮಾಜದ ಸರ್ವ ಜನರ ಬಗ್ಗೆ ಕಾಳಜಿ ತೋರಬೇಕು. ಸಮುದಾಯವನ್ನು ಭಿಕ್ಷುಕರಾಗಿಸುವ ಬದಲು ಸ್ವಾವಲಂಬಿ ಮಾಡಬೇಕಾದ ಝಕಾತ್‌ನ ಉದ್ದೇಶವನ್ನು ವ್ಯಾಪಕವಾಗಿ ಅರಿ ಯುವ ಕಾರ್ಯ ಆಗಬೇಕು ಎಂದರು.

 ಕರ್ನಾಟಕ ಮಸಾಜಿದ್ ಕೌನ್ಸಿಲ್ ಅಧ್ಯಕ್ಷ ಯೂಸುಫ್ ಕನ್ನಿ ಸಮಾರೋಪ ಭಾಷಣ ಮಾಡಿದರು. ಮೌಲಾನಾ ಅಬ್ದುರ್ರಶೀದ್ ಕುರಾನ್ ಪಠಿಸಿದರು. ಮಸಾಜಿದ್ ಕೌನ್ಸಿಲ್ ಅಧ್ಯಕ್ಷ ಸಮೀಉಲ್ಲಾ ಖಾನ್ ಪ್ರಾಸ್ತಾವಿಕವಾಗಿ ಮಾತನಾ ಡಿದರು. ಉಡುಪಿ ಜಿಲ್ಲಾ ವಕ್ಫ್ ಕಚೇರಿಯ ಸಿಬ್ಬಂದಿಗಳಾದ ಮುಜಾಹಿದ್ ಪಾಶಾ, ನಾಝಿಾ, ಸಬೀಹ ಬಾನು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News