ಎಸ್ಸೆಸ್ಸೆಫ್ ಪ್ರತಿಭೋತ್ಸವ: ರಂಗನಕೆರೆ ಶಾಖೆಗೆ ಸಮಗ್ರ ಪ್ರಶಸ್ತಿ

Update: 2017-12-11 15:04 GMT

ಬ್ರಹ್ಮಾವರ, ಡಿ.11: ರಂಗನಕೆರೆಯಲ್ಲಿ ರವಿವಾರ ನಡೆದ ಎಸ್ಸೆಸ್ಸೆಫ್ ಬ್ರಹ್ಮಾವರ ಸೆಕ್ಟರ್ ಮಟ್ಟದ ಪ್ರತಿಭೊತ್ಸವದಲ್ಲಿ ಸಮಗ್ರ ಪ್ರಶಸ್ತಿಯನ್ನು ರಂಗನಕೆರೆ ಶಾಖೆ ಗೆದ್ದುಗೊಂಡಿದೆ.

ಹೊನ್ನಾಳ ಶಾಖೆ ದ್ವಿತೀಯ, ಭದ್ರಗಿರಿ ಶಾಖೆ ತೃತೀಯ ಸ್ಥಾನವನ್ನು ಪಡೆದು ಕೊಂಡಿದೆ. ಜೂನಿಯರ್, ಸೀನಿಯರ್, ಜನರಲ್, ದವ್’ವಾ ಜೂನಿಯರ್, ಸೀನಿಯರ್ ಒಟ್ಟು ಐದು ವಿಭಾಗಗಳಲ್ಲಿ ಸ್ಪರ್ಧೆ ನಡೆದಿದ್ದು, ಜೂನಿಯರ್‌ನಲ್ಲಿ ವೈಯಕ್ತಿಕ ಚಾಂಪಿಯನ್ ಆಗಿ ಝಯಾನ್ ಭದ್ರಗಿರಿ, ಸೀನಿಯರ್‌ನಲ್ಲಿ ಚಾಂಪಿಯನ್ ಆಗಿ ಅಲ್ಪಾಝ್ ರಂಗನಕೆರೆ ಮೂಡಿಬಂದಿದ್ದಾರೆ.

ರಂಗನಕೆರೆ ಮಸೀದಿ ಅಧ್ಯಕ್ಷ ಉಮರುಲ್ ಫಾರೂಕ್ ಧ್ವಜಾರೋಹಣ ಮತ್ತು ಮಸೀದಿ ಖತೀಬ್ ಮಹಮ್ಮದಾಲಿ ಸಹದಿ ದುವಾ ನೆರವೇರಿಸಿದರು. ಬಾರ್ಕೂರು ಮಸೀದಿ ಖತೀಬ್ ರಫೀಕ್ ಮದನಿ ಉದ್ಘಾಟಿಸಿದರು. ಉಡುಪಿ ಡಿವಿಷನ್‌ನ ಮಾಜಿ ಅಧ್ಯಕ್ಷ ಬಿ.ಎ.ಮಹಮ್ಮದಾಲಿ ಸಹದಿ ಸಮಾರೋಪ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಪ್ರತಿಭೋತ್ಸವ ವೈಸ್ ಚೇಯರ್‌ಮೆನ್ ನಿಸಾರ್ ಬೈಕಾಡಿ, ಸಂಚಾಲಕ ಅಬ್ದುರ್ರಹ್ಮಾನ್ ಆರ್.ಕೆ., ಸಹ ಸಂಚಾಲಕ ಮುತ್ತಲಿಬ್, ರಂಗನಕೆರೆ ಮಸೀದಿ ಕಾರ್ಯದರ್ಶಿ ಕಲೀಲ್, ಜೊತೆ ಕಾರ್ಯದರ್ಶ ರಫೀಕ್, ಉಡುಪಿ ಡಿವಿಷನ್ ಕಾರ್ಯದರ್ಶಿ ನಝೀರ್ ಸಾಸ್ತಾನ, ಕೋಶಾಧಿಕಾರಿ ಇಬ್ರಾಹಿಂ, ಜೊತೆ ಕಾರ್ಯದರ್ಶಿ ನವಾಝ್ ಮಣಿಪುರ, ಸೆಕ್ಟರ್ ಕೋಶಾಧಿ ಕಾರಿ ಸುಲೈಮಾನ್, ರಂಗನಕೆರೆ ಎಸ್.ವೈ.ಎಸ್. ಅಧ್ಯಕ್ಷ ಹಮೀದ್ ಮದನಿ, ರಂಗನಕೆರೆ ಶಾಖಾದ್ಯಕ್ಷ ಶಂಶುದ್ದೀನ್, ಸಮದ್ ಮದನಿ, ಸುಲೈಮಾನ್ ಸಾಗರ, ಅಶ್ರಫ್ ಗಾಂಧಿನಗರ, ಭದ್ರಗಿರಿ ಶಾಖಾದ್ಯಕ್ಷ ನಯಾಝ್, ಗಾಂದಿನಗರ ಶಾಖಾದ್ಯಕ್ಷ ಸಿರಾಜ್ ಉಪಸ್ಥಿತರಿದ್ದರು.

ವೀಕ್ಷಕರಾಗಿ ಆಸೀಫ್ ಸರಕಾರಿಗುಡ್ಡೆ, ತೀರ್ಪುಗಾರರಾಗಿ ಇರ್ಫಾನ್ ಆಲಂ ರಝ್ವಿ, ರಫೀಕ್ ಮದನಿ ಬಿ.ಸಿ.ರೋಡ್, ಶರ್ವಾನಿ ಉಸ್ತಾದ್ ದೇರಲಕಟ್ಟೆ, ಯುಸೂಫ್ ಮಾಸ್ಟರ್ ಹೂಡೆ ಸಹಕರಿಸಿದರು. ಬ್ರಹ್ಮಾವರ ಸೆಕ್ಟರ್ ಅಧ್ಯಕ್ಷ ಇಮ್ತಿಯಾಝ್ ಹೊನ್ನಾಳ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ನಾಸೀರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪ್ರತಿಭೊತ್ಸವ ಚೇಯರ್‌ಮೆನ್ ಸಮೀರ್ ಮಿಸ್ಬಾಹಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News