ಗೃಹರಕ್ಷದಳದಿಂದ ಪೊಲೀಸ್ ಸಿಬ್ಬಂದಿ ಕೊರತೆ ನಿವಾರಣೆ: ಡಿವೈಎಸ್ಪಿ

Update: 2017-12-11 15:13 GMT

ಉಡುಪಿ, ನ.11: ಪೊಲೀಸ್ ಇಲಾಖೆಯಲ್ಲಿರುವ ಸಿಬ್ಬಂದಿಗಳ ಕೊರತೆ ಯನ್ನು ಗೃಹರಕ್ಷಕ ದಳ ನೀಗಿಸುತ್ತಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಉಪಾಧೀಕ್ಷಕ ಕುಮಾರಸ್ವಾಮಿ ಹೇಳಿದ್ದಾರೆ.

ಉಡುಪಿ ಜಿಲ್ಲಾ ಗೃಹರಕ್ಷಕ ದಳದ ವತಿಯಿಂದ ಉಡುಪಿಯ ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ ಇಂದು ಆಯೋಜಿಸಲಾದ ಅಖಿಲ ಭಾರತ ಗೃಹರಕ್ಷಕ ದಳ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹರಕ್ಷಕದಳ ಕೊಡುಗೆ ಅಪಾರ. ಇಂದು ಗೃಹರಕ್ಷಕ ದಳದವರು, ಪೊಲೀಸರ ಸಮಾನವಾಗಿ ಕರ್ತವ್ಯ ನಿರ್ವಹಿ ಸುತ್ತಿದ್ದಾರೆ. ರಾತ್ರಿ ಪಾಳಿ, ಬಂದೋಬಸ್ತ್ ಸಂದರ್ಭದಲ್ಲೂ ಗೃಹರಕ್ಷಕ ದಳ ನಮ್ಮ್‌ಂದಿಗೆ ಕೈಜೋಡಿಸಿ ಶಾಂತಿ ಕಾಪಾಡಲು ನೆರವಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಗೃಹರಕ್ಷಕ ದಳದ ಡೆಪ್ಯುಟಿ ಕಮಾಂಡೆಟ್ ರಮೇಶ್, ಮಣಿಪಾಲ ಘಟಕಾಧಿಕಾರಿ ಸರಸ್ವತಿ ಕೋಟ್ಯಾನ್, ಪಡುಬಿದ್ರೆ ಘಟಕಾಧಿಕಾರಿ ನವೀನ್ ಕುಮಾರ್, ಬೈಂದೂರು ಘಟಕಾಧಿಕಾರಿ ರಾಘವೇಂದ್ರ ಎನ್., ಕಾಪು ಪ್ರಭಾರ ಘಟಕಾಧಿಕಾರಿ ಲಕ್ಷ್ಮೀನಾರಾಯಣ ರಾವ್, ಕುಂದಾಪುರ ಘಟಕದ ಭಾಸ್ಕರ ಸಾರ್ಜೇಂಟ್ ಅವರನ್ನು ಸನ್ಮಾನಿಸಲಾಯಿತು.

ಉಡುಪಿ ಗೃಹರಕ್ಷಕದಳದ ಜಿಲ್ಲಾ ಕಮಾಂಡೆಂಟ್ ಕೆ.ಪ್ರಶಾಂತ್ ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಸುಧಾಕರ ಶೆಟ್ಟಿ, ವಾರ್ತಾಧಿಕಾರಿ ರೋಹಿಣಿ ಉಪಸ್ಥಿತರಿದ್ದರು. ಸೆಕೆಂಡ್ ಇನ್ ಕಮಾಂಡ್ ಕೆ.ಸಿ.ರಾಜೇಶ್ ಸ್ವಾಗತಿಸಿದರು. ಸಾಯಿನಾಥ ಉದ್ಯಾವರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News