ಕೇರಳದ ವಿರುದ್ಧ ವಿದರ್ಭಕ್ಕೆ 412 ರನ್‌ಗಳ ಜಯ

Update: 2017-12-11 18:08 GMT

ಸೂರತ್, ಡಿ.11: ರಣಜಿಯಲ್ಲಿ ಇದೇ ಮೊದಲ ಬಾರಿ ಕ್ವಾರ್ಟರ್ ಫೈನಲ್ ಪ್ರ್ರವೇಶಿಸಿದ್ದ ಕೇರಳ ವಿರುದ್ಧ ವಿದರ್ಭ ತಂಡ 412 ರನ್‌ಗಳ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್‌ನಲ್ಲಿ ಅವಕಾಶ ದೃಢಪಡಿಸಿದೆ.

ವಿದರ್ಭ ಇದೇ ಮೊದಲ ಬಾರಿ ಸೆಮಿಫೈನಲ್ ಪ್ರವೇಶಿಸಿದ್ದು, ಸೆಮಿಫೈನಲ್‌ನಲ್ಲಿ ಕರ್ನಾಟಕ ತಂಡದವನ್ನು ಎದುರಿಸಲಿದೆ. ಕರ್ನಾಟಕ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ರವಿವಾರ ಮುಂಬೈ ತಂಡವನ್ನು ಮಣಿಸಿ ಸೆಮಿಫೈನಲ್ ತಲುಪಿತ್ತು.

 ಗೆಲುವಿಗೆ 578 ರನ್‌ಗಳ ಸವಾಲನ್ನು ಪಡೆದ ಕೇರಳ ತಂಡ ಎರಡನೇ ಇನಿಂಗ್ಸ್‌ನಲ್ಲಿ ವಿದರ್ಭ ತಂಡದ ಆದಿತ್ಯ ಸಾರ್ವಟೆ(41ಕ್ಕೆ 6) ದಾಳಿಗೆ ತತ್ತರಿಸಿ 52.2 ಓವರ್‌ಗಳಲ್ಲ್ಲಿ 165 ರನ್‌ಗಳಿಗೆ ಆಲೌಟಾಗಿದೆ. ಕೇರಳದ ಸಲ್ಮಾನ್ ನಿಝಾರ್ ಮಾತ್ರ ಅರ್ಧಶತಕ(64) ಕೊಡುಗೆ ನೀಡಿದರು. ಮೊದಲ ಇನಿಂಗ್ಸ್‌ನಲ್ಲಿ ವಿದರ್ಭ 246 ರನ್ ಮತ್ತು ಕೇರಳ 176 ರನ್ ಗಳಿಸಿತ್ತು. ದ್ವಿತೀಯ ಇನಿಂಗ್ಸ್‌ನಲ್ಲಿ ವಿದರ್ಭ 9 ವಿಕೆಟ್ ನಷ್ಟದಲ್ಲಿ 507 ರನ್ ಗಳಿಸಿತ್ತು. ಫೈಝ್ ಫಝಲ್ (119) ಮತ್ತು ಅಪೂರ್ವ್ ವಾಂಖೇಡೆ (107) ಶತಕಗಳ ನೆರವಿನಲ್ಲಿ ವಿದರ್ಭ ತಂಡ ಕೇರಳಕ್ಕೆ ಕಠಿಣ ಸವಾಲು ವಿಧಿಸಿತ್ತು. ಆದರೆ ಕೇರಳಕ್ಕೆ ಗೆಲುವಿನ ಸವಾಲನ್ನು ಬೆನ್ನಟ್ಟಲು ಸಾಧ್ಯವಾಗದೆ ಬೇಗನೇ ಗಂಟು ಮೂಟೆ ಕಟ್ಟಿತು. ಮೊದಲ ಬಾರಿ ಸೆಮಿಫೈನಲ್ ತಲುಪುವ ಅವಕಾಶವನ್ನು ವಿದರ್ಭ ತಂಡಕ್ಕೆ ಬಿಟ್ಟುಕೊಟ್ಟಿತು.

ಸಂಕ್ಷಿಪ್ತ ಸ್ಕೋರ್ ವಿವರ

►ವಿದರ್ಭ ಪ್ರಥಮ ಇನಿಂಗ್ಸ್ 246, ಕೇರಳ ಪ್ರಥಮ ಇನಿಂಗ್ಸ್ 176,

►ವಿದರ್ಭ ದ್ವಿತೀಯ ಇನಿಂಗ್ಸ್ 507/9 ಡಿಕ್ಲೇರ್,

►ಕೇರಳ ದ್ವಿತೀಯ ಇನಿಂಗ್ಸ್ 165(ಸಲ್ಮಾನ್ ನಿಝಾರ್ 64; ಆದಿತ್ಯ 41ಕ್ಕೆ 6).

ಗುಜರಾತ್‌ನ್ನು ಹೊರದಬ್ಬಿದ ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳ ಮತ್ತು ಗುಜರಾತ್ ತಂಡಗಳ ನಡುವಿನ ರಣಜಿ ಟ್ರೋಫಿ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ.ಬಂಗಾಳ ತಂಡ ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ ಅಂತಿಮ ನಾಲ್ಕರ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.

 ಮೊದಲ ಇನಿಂಗ್ಸ್‌ನಲ್ಲಿ ಬಂಗಾಳ 324 ರನ್ ಗಳಿಸಿತ್ತು. ಗುಜರಾತ್ 224 ರನ್ ಗಳಿಸುವುದರೊಂದಿಗೆ 120 ರನ್‌ಗಳ ಹಿನ್ನಡೆ ಅನುಭವಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ ರಿತಿಕ್ ಚಟರ್ಜಿ (226) ದ್ವಿಶತಕ ಮತ್ತು ಅನುಸ್ತಪ್ ಮಜುಂದಾರ್ (ಔಟಾಗದೆ 136) ಮತ್ತು ಅಭಿಮನ್ಯು ಈಶ್ವರನ್(114) ಶತಕಗಳ ನೆರವಿನಲ್ಲಿ ಬಂಗಾಳ 6 ವಿಕೆಟ್ ನಷ್ಟದಲ್ಲಿ 695 ರನ್ ಗಳಿಸಿತ್ತು. ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿದ ಹಿನ್ನೆಲೆಯಲ್ಲಿ ಬಂಗಾಳ ಸೆಮಿಫೈನಲ್‌ಗೆ ತೇರ್ಗಡೆಯಾಗಿದೆ.

ಸಂಕ್ಷಿಪ್ತ ಸ್ಕೋರ್

►ಬಂಗಾಳ ಮೊದಲ ಇನಿಂಗ್ಸ್ 354, ಗುಜರಾತ್ ಮೊದಲ ಇನಿಂಗ್ಸ್ 224, ಬಂಗಾಳ ದ್ವಿತೀಯ ಇನಿಂಗ್ಸ್ 231 ಓವರ್‌ಗಳಲ್ಲಿ 695/6

(ಚಟರ್ಜಿ 226, ಮಜುಂದಾರ್ ಔಟಾಗದೆ 136, ಈಶ್ವರನ್ 114; ಈಶ್ವರ ಚೌಧರಿ 95ಕ್ಕೆ 2) .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News