ಪ್ರೊ ಕುಸ್ತಿ ಲೀಗ್ ಪ್ರವೇಶಿಸಲಿರುವ ಸುಶೀಲ್ ಕುಮಾರ್

Update: 2017-12-11 18:12 GMT

ಹೊಸದಿಲ್ಲಿ, ಡಿ.11: ಒಲಿಂಪಿಕ್ಸ್‌ನಲ್ಲಿ ಎರಡು ಬಾರಿ ಪದಕ ಜಯಿಸಿರುವ ಖ್ಯಾತ ಕುಸ್ತಿಪಟು ಸುಶೀಲ್ ಕುಮಾರ್ ಅವರು ಪ್ರೊ ಕುಸ್ತಿ ಲೀಗ್(ಪಿಡಬ್ಲುಎಲ್)ಗೆ ಚೊಚ್ಚಲ ಪ್ರವೇಶ ಪಡೆಯಲಿದ್ದಾರೆ. ಸುಶೀಲ್ ಕುಮಾರ್ ಮುಂದಿನ ತಿಂಗಳು ನಡೆಯಲಿರುವ ಪಿಡಬ್ಲುಎಲ್‌ನ 74 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಏಷ್ಯನ್ ಹಾಲಿ ಚಾಂಪಿಯನ್ ಬಜರಂಗ್ ಪೂನಿಯಾ ಮತ್ತು 2016ರ ಒಲಿಂಪಿಕ್ಸ್ ನಲ್ಲಿ ಕಂಚು ಪಡೆದ ಸಾಕ್ಷಿ ಮಲಿಕ್ ಸ್ಪರ್ಧಾ ಕಣದಲ್ಲಿದ್ದಾರೆ.

 ಒಲಿಂಪಿಕ್ಸ್ ಮತ್ತು ವರ್ಲ್ಡ್ ಚಾಂಪಿಯನ್ ಅಮೆರಿಕದ ಹೆಲೆನ್ ಮಾರೌಲಿಸ್ ಅವರು ಮೊದಲ ಬಾರಿ ಕೂಟದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News