ಕಾಪು: ಬಡಕುಟುಂಬಕ್ಕೆ ಉಚಿತ ವಿದ್ಯುತ್ ಸಂಪರ್ಕ ಉದ್ಘಾಟನೆ

Update: 2017-12-12 13:54 GMT

ಕಾಪು, ಡಿ. 12: ಮಲ್ಲಾರು ಗ್ರಾಮದ ಅಚ್ಚಾಲು ನಿವಾಸಿ ಜಯಶೇಖರ ಶೇರ್ವೆಗಾರ ಎಂಬ ಬಡ ಕುಟುಂಬದ ಮನೆಗೆ ಜಮಾಅತೆ ಇಸ್ಲಾಮೀ ಹಿಂದ್ ಕಾಪು ವರ್ತುಲವು ವತಿಯಿಂದ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ವಿದ್ಯುತ್ ಸಂಪರ್ಕವನ್ನು ಉದ್ಘಾಟಿಸಿದ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಸಲಹಾ ಸಮಿತಿಯ ಸದಸ್ಯ ಅಕ್ಬರ್ ಆಲಿ, ಪ್ರವಾದಿ ಮುಹಮ್ಮದ್‌ (ಸ.ಅ) ರವರ ಜನಿಸಿದ ತಿಂಗಳಲ್ಲಿ ಅವರ ಬೋಧನೆಯ ಪ್ರಕಾರ ನೆರೆಕೆರೆಯವರ ಬೇಡಿಕೆಯನ್ನು ತೀರಿಸಿ ಎಂಬ ವಚನವನ್ನು ಆಧಾರವಾಗಿಟ್ಟುಕೊಂಡು ಪ್ರೇಮದ ನೈಜ ಅನುಸ್ಮರಣೆಗಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪ್ರವಾದಿಯರ್ವರು ಜಗತ್ತಿಗೆ ಸಾರಿದ ಶಾಂತಿ, ಸೌಹಾರ್ದತೆಯನ್ನು ಪ್ರತಿರ್ಯೋರ್ವರಿಗೆ ತಿಳಿಸಬೇಕಾಗಿದೆ. ಜಮಾಅತೆ ಇಸ್ಲಾಮೀ ಹಿಂದ್ ಈ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿದೆ ಎಂದು ಹೇಳಿದರು.

ಜಿಲ್ಲಾ ಸಂಚಾಲಕ ಎಂ.ಶಬ್ಬೀರ್ ಮಲ್ಪೆ, ಪುರಸಭಾ ಸದಸ್ಯ ಅರುಣ್ ಶೆಟ್ಟಿ ಪಾದೂರು, ಜೆಸಿಐ ವಲಯಾಧ್ಯಕ್ಷ ರಾಕೇಶ್ ಕುಂಜೂರು, ಕಾಪು ಸ್ಥಾನೀಯ ಸಮಿತಿಯ ಅಧ್ಯಕ್ಷ ಅನ್ವರ್ ಆಲಿ ಕಾಪು, ಮುಹಮ್ಮದ್ ಇಕ್ಬಾಲ್ ಮಜೂರು, ಮುಹಮ್ಮದ್ ಸಾದಿಕ್ ಫೈರ್, ಮುಹಮ್ಮದ್ ಆಲಿ, ಅಬ್ದುಲ್ ಶುಕೂರ್, ಶಾಬುದ್ದೀನ್ ಸಾಹೇಬ್, ಅಬ್ದುಲ್ ಖಾದರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News