ಡಿ. 14: ಮುಂಡಾಜೆ ನೂತನ ಮಸೀದಿ ಉದ್ಘಾಟನೆ, ಸೌಹಾರ್ದ ಸಮ್ಮಿಲನ

Update: 2017-12-12 15:28 GMT

ಬೆಳ್ತಂಗಡಿ, ಡಿ. 12: ಮಸ್ಲಕ್‌ತ್ತ ಅಲೀಮಿ ಸ್ಸುನ್ನಿಯ್ಯ ಮುಂಡಾಜೆ ಇದರ ವತಿಯಿಂದ ದಾನಿಗಳ ಸಹಕಾರದೊಂದಿಗೆ ಮುಂಡಾಜೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಸುನ್ನೀ ಮಸೀದಿಯ ಉದ್ಘಾಟನೆ ಡಿ. 14 ರಂದು ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಸೈಯದ್ ಕಾಜೂರು ತಂಙಳ್ ಮತ್ತು ಜಮಾಅತ್‌ ಅಧ್ಯಕ್ಷ ಅಶ್ರಫ್‌ ಆಲಿಕುಂಞಿ ತಿಳಿಸಿದರು. 

ಡಿ. 12 ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಅವರು ವಿವರ ನೀಡಿದರು. 9 ವರ್ಷಗಳ ಹಿಂದೆ ಸ್ಥಾಪಿತವಾದ ಸಮಿತಿಯು ಸಹಕಾರಿ ಸಂಘಗಳ ಕಾಯಿದೆಯಂತೆ ನೊಂದಾಯಿತಗೊಂಡಿದೆ. ಮುಂಡಾಜೆ ಗ್ರಾಮದಲ್ಲಿ ಸಂಸ್ಥೆಯ ಹೆಸರಿನಲ್ಲಿ 50 ಸೆಂಟ್ಸ್ ಭೂಮಿ ಖರೀದಿಸಿ ಇದೀಗ ಸರಕಾರದ ವಕ್ಫ್ ಸಂಸ್ಥೆಗೆ ನೊಂದಾವಣೆ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ.  ಈಗಾಗಲೆ ಅಖಿಲ ಭಾರತ ಸುನ್ನೀ ವಿದ್ಯಾಭ್ಯಾಸ ಬೋರ್ಡ್‌ ಅಂಗೀಕೃತ ಪಠ್ಯಕ್ರಮ ಇರುವ 1 ರಿಂದ 8 ನೇ ತರಗತಿ ವರೆಗಿನ ಮದರಸವು ನಡೆಯುತ್ತಿದೆ. 41 ಕುಟುಂಬಗಳಿರುವ ಜಮಾಅತ್‌ಗೆ ಅತ್ಯಂತ ಅವಶ್ಯವಾಗಿದ್ದ ಮಸೀದಿಯನ್ನು ಉಡುಪಿ ಜಿಲ್ಲೆಯ 96 ವರ್ಷ ಪ್ರಾಯದ ಹಿರಿಯ ಮುತ್ಸದ್ದಿ ಮುಹ್ಯುದ್ದೀನ್ ಹಾಜಿ ಹಾಗೂ ಅವರ ಮಕ್ಕಳು ಸುಮಾರು 25 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ನಿರ್ಮಿಸಿ ನೀಡಿದ್ದಾರೆ. ಡಿ. 14 ರಂದುಧಾರ್ಮಿಕ ವಿಧಿ ಪೂರೈಸಿ ಹಸ್ತಾಂತರಿಸಲಿದ್ದಾರೆ. ಎಂದರು.

ನೂತನ ಮಸೀದಿ ಉದ್ಘಾಟನೆಯನ್ನು ಸೈಯದ್ ಕೂರತ್ ತಂಙಳ್, ಬೇಕಲ್‌ ಇಬ್ರಾಹಿಂ ಮುಸ್ಲಿಯಾರ್, ಮಸೀದಿ ದಾನಿ ಮುಕ್ರಿ ಹಾಜಿ ಉದ್ಘಾಟಿಸಿ ಸಮರ್ಪಿಸಲಿದ್ದಾರೆ. ಕಾಜೂರು ತಂಙಳ್ ಅಧ್ಯಕ್ಷತೆ ವಹಿಸಲಿದ್ದು, ಸಹಾಯಕ ಖಾಝಿ ಸಾದಾತ್ ತಂಙಳ್, ಸಂಯುಕ್ತ ಜಮಾಅತ್ ಅಧ್ಯಕ್ಷ ಇಸ್ಮಾಯಿಲ್ ತಂಙಳ್, ಮಲ್‌ಜಅ ತಂಙಳ್, ಕಿಲ್ಲೂರು ತಂಙಳ್, ಮನ್‌ಶರ್ ತಂಙಳ್, ಬೆಳಾಲ್ ತಂಙಳ್, ಮುರ ತಂಙಳ್, ಅಬ್ದುಸ್ಸಲಾಂ ತಂಙಳ್, ಯೆನೆಪೊಯ ಅಬ್ದುಲ್ಲಕುಂಞಿ, ನಿಡಿಗಲ್ ಜಮಾಅತ್‌ ಅಧ್ಯಕ್ಷ ಮುಜೀಬ್ ಸಾಹೇಬ್, ಖತೀಬ್ ಬದ್ರುದ್ದೀನ್ ಸಖಾಫಿ ಹಾಗೂ ಇತರರು ಭಾಗವಹಿಸಲಿದ್ದಾರೆ ಎಂದರು. 

ಈ ಮಸೀದಿ ಉದ್ಘಾಟನೆಯ ಸಂದರ್ಭ ಸೌಹಾರ್ದ ಸಮ್ಮೇಳನ ನಡೆಯಲಿದ್ದು ಶಾಸಕ ವಸಂತ ಬಂಗೇರ, ಸಹಿತಿ ಸ್ಥಳೀಯ ಜನಪ್ರತಿನಿಧಿಗಳು  ಧಾರ್ಮಿಕ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಸಮಿತಿ ಕಾರ್ಯಾಧ್ಯಕ್ಷ ಹಾಜಬ್ಬ, ಸ್ಥಾಪಕ ಸದಸ್ಯಅಬ್ದುಲ್ ಮಜೀದ್, ಜಮಾಅತ್ ಕಾರ್ಯದರ್ಶಿ ಶಬೀರ್ ಬಿ.ಕೆ.ಎಚ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News