ಪೂರ್ವ ಜೆರುಸಲೇಂನ್ನು ಫೆಲೆಸ್ತೀನ್ ರಾಜಧಾನಿಯಾಗಿ ಮಾನ್ಯ ಮಾಡಿ

Update: 2017-12-13 16:42 GMT

ಇಸ್ತಾಂಬುಲ್ (ಟರ್ಕಿ), ಡಿ. 13: ಆಕ್ರಮಿತ ಪೂರ್ವ ಜೆರುಸಲೇಂನ್ನು ಫೆಲೆಸ್ತೀನ್ ರಾಜಧಾನಿಯಾಗಿ ಮಾನ್ಯ ಮಾಡುವಂತೆ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಬುಧವಾರ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದ್ದಾರೆ.

ಜೆರುಸಲೇಂನ್ನು ಇಸ್ರೇಲ್ ರಾಜಧಾನಿಯಾಗಿ ಮಾನ್ಯ ಮಾಡಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನಿರ್ಧಾರಕ್ಕೆ ಪ್ರತಿಯಾಗಿ ಅವರು ಈ ಮನವಿ ಮಾಡಿದ್ದಾರೆ.

‘‘ಆಕ್ರಮಿತ ಜೆರುಸಲೇಂನ್ನು ಫೆಲೆಸ್ತೀನ್ ರಾಜಧಾನಿಯಾಗಿ ಮಾನ್ಯ ಮಾಡುವಂತೆ ಅಂತಾರಾಷ್ಟ್ರೀಯ ಕಾನೂನು ಮತ್ತು ನ್ಯಾಯವನ್ನು ಗೌರವಿಸುವ ದೇಶಗಳಿಗೆ ನಾನು ಮನವಿ ಮಾಡುತ್ತೇನೆ’’ ಎಂದು ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ)ಯ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಎರ್ದೊಗಾನ್ ಹೇಳಿದರು.

ಇಸ್ಲಾಮಿಕ್ ದೇಶಗಳು ಈ ಬೇಡಿಕೆಯನ್ನು ಯಾವತ್ತೂ ಕೈಬಿಡುವುದಿಲ್ಲ ಎಂದು ಸಂಘಟನೆಯ ತುರ್ತು ಸಭೆಯಲ್ಲಿ ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News