ದುಬೈ ಸೂಪರ್ ಸಿರೀಸ್: ಸಿಂಧು ಶುಭಾರಂಭ
Update: 2017-12-13 23:44 IST
ದುಬೈ, ಡಿ.13: ದುಬೈ ಸೂಪರ್ ಸರಣಿ ಫೈನಲ್ಸ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ.ಸಿಂಧು ಶುಭಾರಂಭ ಮಾಡಿದ್ದಾರೆ. ಆದರೆ, ಶ್ರೀಕಾಂತ್ ಸೋಲನುಭವಿಸಿದ್ದಾರೆ.
ಇಲ್ಲಿ ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ‘ಎ’ ಗುಂಪಿನ ಮೊದಲ ಪಂದ್ಯದಲ್ಲಿ ವಿಶ್ವದ ನಂ.3ನೇ ಆಟಗಾರ್ತಿ ಸಿಂಧು ಚೀನಾದ ವಿಶ್ವದ ನಂ.9ನೇ ಆಟಗಾರ್ತಿ ಹಿ ಬಿಂಗ್‌ಜಾವೊ ಅವರನ್ನು 21-11, 16-21, 21-18 ಗೇಮ್‌ಗಳ ಅಂತರದಿಂದ ಮಣಿಸಿದರು.ಮೊದಲ ಗೇಮ್‌ನ್ನು 21-11 ರಿಂದ ಜಯಿಸಿದ್ದ ಸಿಂಧು ಆರಂಭದಲ್ಲಿ ಮೇಲುಗೈ ಸಾಧಿಸಿದರು. ಆದರೆ ಎರಡನೇ ಗೇಮ್‌ನ್ನು 21-16ರಿಂದ ಜಯಿಸಿದ ಬಿಂಗ್‌ಜಾವೊ ತಿರುಗೇಟು ನೀಡಿದರು. ಮೂರನೇ ಹಾಗೂ ನಿರ್ಣಾಯಕ ಗೇಮ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಸಿಂಧು 21-16 ಅಂತರದಿಂದ ಗೆಲುವು ಸಾಧಿಸಿದರು. ಶ್ರೀಕಾಂತ್ ಡೆನ್ಮಾರ್ಕ್‌ನ ವಿಕ್ಟರ್ ವಿರುದ್ಧ 13-21, 17-21 ಅಂರತರದಿಂದ ಸೋತಿದ್ದಾರೆ.