ನ್ಯೂಝಿಲೆಂಡ್‌ನಲ್ಲಿ ಸ್ಟೋಕ್ಸ್ ಭರ್ಜರಿ ಬ್ಯಾಟಿಂಗ್

Update: 2017-12-14 18:11 GMT

ವೆಲ್ಲಿಂಗ್ಟನ್, ಡಿ.14: ನೈಟ್ ಕ್ಲಬ್ ಹೊರಗೆ ಹೊಡೆದಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಂಗ್ಲೆಂಡ್ ತಂಡದಿಂದ ಹೊರದಬ್ಬಲ್ಪಟ್ಟ ಬ್ಯಾಟ್ಸ್‌ಮನ್ ಬೆನ್ ಸ್ಟೋಕ್ಸ್ ನ್ಯೂಝಿಲೆಂಡ್‌ನ ದೇಶಿಯ ಕ್ರಿಕೆಟ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

ನ್ಯೂಝಿಲೆಂಡ್‌ನ ಟ್ವೆಂಟಿ-20 ಕ್ರಿಕೆಟ್ ಪಂದ್ಯದಲ್ಲಿ ಸ್ಟೋಕ್ಸ್ 47 ಎಸೆತಗಳಲ್ಲಿ 93 ರನ್ ಸಿಡಿಸಿದ್ದಾರೆ.

   ಸ್ಟೋಕ್ಸ್ ಅವರ ಬ್ಯಾಟಿಂಗ್ ನೆರವಿನಲ್ಲಿ ನ್ಯೂಝಿಲೆಂಡ್‌ನ ಕ್ಯಾಂಟರ್‌ಬರಿ ತಂಡ 9 ವಿಕೆಟ್ ನಷ್ಟದಲ್ಲಿ 217 ರನ್ ಗಳಿಸಿತ್ತು. ಒಟಾಗೊ ವಿರುದ್ಧದ ಪಂದ್ಯದಲ್ಲಿ ಸ್ಟೋಕ್ಸ್ 47 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 6 ಬೌಂಡರಿಗಳನ್ನು ಒಳಗೊಂಡ 93 ರನ್ ಬಾರಿಸಿ ಕ್ಯಾಂಟರ್‌ಬರಿ ತಂಡದ ಗೆಲುವಿಗೆ ನೆರವಾದರು.

 ಇದೇ ವೇಳೆ ಇಂಗ್ಲೆಂಡ್ ತಂಡ ಆ್ಯಶಸ್ ಟೆಸ್ಟ್ ಸರಣಿಯಲ್ಲಿ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಸೋತು 0-2 ಹಿನ್ನಡೆ ಅನುಭವಿಸಿದೆ. ಪರ್ತ್‌ನಲ್ಲಿ ಗುರುವಾರ ಆರಂಭವಾಗಿರುವ ಮೂರನೇ ಟೆಸ್ಟ್‌ನಲ್ಲಿ ಸೋಲು ಅನುಭವಿಸಿದರೆ ಸರಣಿ ಆಸ್ಟ್ರೇಲಿಯದ ಮಡಿಲಿಗೆ ಜಾರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News