×
Ad

ನಾಸಿಕ್ ಬಳಿ ಅಪಾರ ಶಸ್ತ್ರಾಸ್ತ್ರಗಳಿದ್ದ ಕಾರು ವಶ,ಮೂವರ ಬಂಧನ

Update: 2017-12-15 21:05 IST

ಮುಂಬೈ,ಡಿ.15: ನಾಸಿಕ್ ಜಿಲ್ಲೆಯ ಚಂದವಾಡದಲ್ಲಿ ಅಪಾರ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳಿದ್ದ ಕಾರೊಂದನ್ನು ಗುರುವಾರ ರಾತ್ರಿ ವಶಪಡಿಸಿಕೊಂಡಿರುವ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮುಂಬೈ ನೋಂದಣಿ ಸಂಖ್ಯೆಯನ್ನು ಹೊಂದಿದ್ದ ಕಾರಿನಲ್ಲಿ 25 ರೈಫಲ್‌ಗಳು, 19 ನಾಡ ಪಿಸ್ತೂಲುಗಳು ಮತ್ತು 4,000 ಗುಂಡುಗಳು ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಾರಿನಲ್ಲಿದ್ದವರು ತಾವು ಮಾಲೇಗಾಂವ್‌ನಿಂದ ಮುಂಬೈಗೆ ತೆರಳುತ್ತಿರುವುದಾಗಿ ಹೇಳಿಕೊಂಡಿದ್ದರು. ಚಂದವಾಡ ಟೋಲ್ ಬೂತ್ ಬಳಿ ಪೊಲೀಸರು ಕಾರನ್ನು ತಡೆದು ನಿಲ್ಲಿಸುವ ಮುನ್ನ ಆರೋಪಿಗಳು ಪೆಟ್ರೋಲ್ ಪಂಪ್‌ವೊಂದರಲ್ಲಿ ಕಾರಿಗೆ ಇಂಧನ ತುಂಬಿಸಿಕೊಂಡ ಬಳಿಕ ಹಣವನ್ನು ಕೇಳಿದ ಸಿಬ್ಬಂದಿಗೆ ಪಿಸ್ತೂಲು ತೋರಿಸಿ ಬೆದರಿಕೆಯೊಡ್ಡಿ ಪರಾರಿಯಾಗಿದ್ದರು. ಈ ಬಗ್ಗೆ ಪಂಪ್‌ನ ಮಾಲಿಕ ಪೊಲೀಸರಿಗೆ ಮಾಹಿತಿ ನೀಡಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News