ನನ್ನ ಮಗ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿಲ್ಲ: ಬಲ್ಜೀತ್ ಜೊಬನ್

Update: 2017-12-15 18:27 GMT

ಹೊಸದಿಲ್ಲಿ, ಡಿ.15: ‘‘ನನ್ನ ಮಗ ಇಂಗ್ಲೆಂಡ್ ಅಥವಾ ಆಸ್ಟ್ರೇಲಿಯದಲ್ಲಿಲ್ಲ. ಈ ಎರಡು ದೇಶಗಳ ನಡುವೆ ನಡೆಯುತ್ತಿರುವ ಆ್ಯಶಸ್ ಕ್ರಿಕೆಟ್ ಸರಣಿಯಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಲು ಪ್ರಯತ್ನಿಸಿಲ್ಲ’’ ಎಂದು ಸ್ಪಾಟ್ ಫಿಕ್ಸಿಂಗ್ ಆರೋಪ ಎದುರಿಸುತ್ತಿರುವ ದಿಲ್ಲಿಯ ಮಾಜಿ ಕ್ರಿಕೆಟಿಗ ಸೋಬರ್ಸ್ ಜೊಬನ್‌ರ ತಂದೆ ಬಲ್ಜೀತ್ ಜೊಬನ್ ಹೇಳಿದ್ದಾರೆ.

ಬ್ರಿಟನ್ ಟ್ಯಾಬಾಯ್ಡಾ ‘ದಿ ಸನ್‌‘ ನಡೆಸಿರುವ ಕುಟುಕು ಕಾರ್ಯಾಚರಣೆಯಲ್ಲಿ ಸೋಬರ್ಸ್ ಹಾಗೂ ಇನ್ನೊಬ್ಬ ಬುಕ್ಕಿ ಪ್ರಿಯಾಂಕ್ ಸಕ್ಸೇನಾ 140,000 ಪೌಂಡ್‌ಗೆ ಮೂರನೇ ಆ್ಯಶಸ್ ಟೆಸ್ಟ್ ಪಂದ್ಯವನ್ನು ಫಿಕ್ಸ್ ಮಾಡಬಲ್ಲೆವು ಎಂದು ಹೇಳಿದ್ದರು.

ಪರ್ತ್‌ನಲ್ಲಿ ನಡೆಯುತ್ತಿರುವ 3ನೇ ಟೆಸ್ಟ್‌ನಲ್ಲಿ ಮೋಸದಾಟ ನಡೆದಿರುವ ಬಗ್ಗೆ ಯಾವುದೇ ಪುರಾವೆ ಲಭಿಸಿಲ್ಲ ಎಂದು ಐಸಿಸಿ ಭ್ರಷ್ಟಾಚಾರ ನಿಗ್ರಹ ಘಟಕ ಹೇಳಿದೆ.

‘‘ನನ್ನ ಮಗ ಬ್ರಿಟನ್ ಅಥವಾ ಆಸ್ಟ್ರೇಲಿಯದಲ್ಲಿಲ್ಲ. ದಿ ಸನ್ ಪತ್ರಿಕೆಯ ಆರೋಪ ಸತ್ಯಕ್ಕೆ ದೂರವಾದುದು. ನನ್ನ ಮಗ ದುಬೈ ಹಾಗೂ ರಶ್ಯಕ್ಕೆ ಹೋಗುತ್ತಾನೆ. ರಶ್ಯದಲ್ಲಿ ಆತನ ಪತ್ನಿಯಿದ್ದಾಳೆ’’ ಎಂದು ಹೇಳಿದ್ದಾರೆ.

ಬಲ್ಜೀತ್ ಜೊಬನ್ ಲಾಲ್‌ಬಹದ್ದೂರ್ ಶಾಸ್ತ್ರಿ ಕೋಚಿಂಗ್ ಕೇಂದ್ರವನ್ನು ನಡೆಸುತ್ತಿದ್ದು ಗೌತಮ್ ಗಂಭೀರ್ ಇದೇ ಕೇಂದ್ರದಲ್ಲಿ ತರಬೇತಿ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News