×
Ad

2019ರ ಚುನಾವಣೆಯಲ್ಲಿ ಮೋದಿಯೇ ಜನಪ್ರಿಯ ನಾಯಕ

Update: 2017-12-16 15:06 IST

ಹೊಸದಿಲ್ಲಿ,ಡಿ.16: ನರೇಂದ್ರ ಮೋದಿ ಮುಂದಿನ ಲೋಕಸಭಾ ಚುನವಣೆಯಲ್ಲಿಯೂ ಭಾರತದಲ್ಲಿ ಅತ್ಯಂತ ಜನಪ್ರಿಯ ನಾಯಕನಾಗಿರಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಟೈಮ್ಸ್ ಗ್ರೂಪ್ ನಡೆಸಿದ ಆನ್‍ಲೈನ್ ಸಮೀಕ್ಷೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿ ಆಯ್ಕೆಯಾಗಲಿದ್ದಾರೆ ಎಂದು ಹೆಚ್ಚಿನವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟೈಮ್ಸ್ ಗ್ರೂಪ್‍ನ ಒಂಬತ್ತು ಭಾಷೆಯ ಮಾಧ್ಯಮ ವಿಭಾಗಗಳಲಿ ನಡೆಸಿದ ಸಮೀಕ್ಷೆಯಲಿ ಶೇ.79 ಮಂದಿ ಮೋದಿಯವರಿಗೆ ಮತಹಾಕುತ್ತೇವೆ ಎಂದಿದ್ದಾರೆ. ಮೋದಿ ನೇತೃತ್ವದ ಸರಕಾರವೇ 2019ರ ಚುನಾವಣೆಯ ನಂತರವೂ ಮುಂದುವರಿಯಬೇಕೆನ್ನುವ ಅಭಿಪ್ರಾಯ ಇವರಲ್ಲಿದೆ.

ಮೂರು ಹಂತದಲ್ಲಿ ನಡೆಸಲಾದ ಆನ್‍ಲೈನ್ ಸಮೀಕ್ಷೆಯಲ್ಲಿ  ಡಿಸೆಂಬರ್ 12ರಿಂದ 15ರವರೆಗಿನ 72 ಗಂಟೆಗಳಲ್ಲಿ ಐದು ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ.  ರಾಹುಲ್ ಗಾಂಧಿಗೆ ಶೇ. 20ರಷ್ಟು ಮಂದಿ ಮತಹಾಕುತ್ತೇವೆ ಎಂದಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ.58ರಷ್ಟು ಮಂದಿ ರಾಹುಲ್ ಗಾಂಧಿ ಬಗ್ಗೆ ಒಲವು ವ್ಯಕ್ತಪಡಿಸಲಿಲ್ಲ.

ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷನಾದರೂ ಬಿಜೆಪಿಗೆ ಪರ್ಯಾಯವಾಗಲು ಸಾಧ್ಯವಿಲ್ಲ ಎಂದು ಶೇ. 73ರಷ್ಟು ಮಂದಿ ಹೇಳಿದ್ದಾರೆ. ಗಾಂಧಿ ಕುಟುಂಬಕ್ಕೆ ಸೇರದ ಯಾರೂ ಬಂದರೂ ಕಾಂಗ್ರೆಸ್ಸಿಗೆ ಮತಹಾಕುವುದಿಲ್ಲ ಎಂದು ಶೇ. 39ರಷ್ಟು ಮಂದಿ ಹೇಳಿದ್ದಾರೆ. ಗಾಂಧಿ ಕುಟುಂಬದಿಂದ ಹೊರಗಿನವರು ಬಂದರೆ ಮತಹಾಕುತ್ತೇವೆ ಎಂದು ಶೇ.37ರಷ್ಟು ಮಂದಿ ಹೇಳಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿಯಾದರೆ ಬಿಜೆಪಿಗೆ ಮತಹಾಕುವುದಿಲ್ಲ ಎಂದು ಶೇ.31ರಷ್ಟು ಮಂದಿ ಹೇಳಿದ್ದಾರೆ. ಆದರೆ ಮೋದಿ ಅಲ್ಲದಿದ್ದರೂ ಬಿಜೆಪಿಗೆ ಮತಹಾಕುತ್ತೇವೆ ಎಂದು ಶೇ. 48 ಮಂದಿ ಸಮೀಕ್ಷೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News