ಚೆಂಬರಿಕ ಖಾಝಿ ನಿಗೂಢ ಮರಣ ಪ್ರಕರಣ : ಸಿಬಿಐ ತನಿಖೆಗೆ ಹೆಚ್ಚುವರಿ ಸಮಯಾವಕಾಶ ನೀಡಿದ ನ್ಯಾಯಾಲಯ

Update: 2017-12-16 10:18 GMT

ಕೊಚ್ಚಿ,ಡಿ.16: ಚೆಂಬರಿಕ ಖಾಝಿಯಾಗಿದ್ದ ಸಿಎಂ ಅಬ್ದುಲ್ಲ ಮೌಲವಿಯ  ನಿಗೂಡ ಮರಣಕ್ಕೆ ಸಂಬಂಧಿಸಿದ ಹೊಸ ಬೆಳವಣಿಗಗಳ ಆಧಾರದಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಲು ಸಿಬಿಐಗೆ ಹೆಚ್ಚು ವರಿ ಸಮಯ ನೀಡಲಾಗಿದೆ. ತನಿಖೆ ಪೂರ್ತಿಗೊಳಿಸಲು  ಎರಡು ತಿಂಗಳು ಹೆಚ್ಚುವರಿ  ಸಮಯವನ್ನು ನೀಡಬೇಕೆಂದು ಎರ್ನಾಕುಳಂ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಸಿಬಿಡಿ ಅರ್ಜಿಸಲ್ಲಿಸಿತ್ತು. ಅದನ್ನು ಪುರಸ್ಕರಿಸಿದ ಕೋಟು ಸಿಬಿಐಗೆ  ಫೆಬ್ರವರಿ ಒಂಬತ್ತರವರಗೆ  ಪ್ರಕರಣದ ತನಿಖೆ ಮುಗಿಸಲು ಕಾಲಾವಕಾಶ ನೀಡಿದೆ. .

ಹೊಸ ಸಾಕ್ಷ್ಯಗಳ ಆಧಾರದಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವವರೆಗೆ ಸಿಬಿಐ ಜನವರಿ 25ಕ್ಕೆ ಸಲ್ಲಿಸಿದ ಅಂತಿಮ ವರದಿಯನ್ನು ಪರಿಗಣಿಸುವುದಿಲ್ಲ ಎಂದು ಕೋರ್ಟು ತಿಳಿಸಿದೆ. ಚೆಂಬರಿಕೆ ಖಾಝಿ ನಿಗೂಡ ಮರಣ ಪ್ರಕರಣಕ್ಕೆ ಸಂಬಂಧಿಸಿ ಆಟೊ ಚಾಲಕ ಅಶ್ರಫ್ ತನ್ನೊಂದಿಗೆ ಕೆಲವು ವಿಷಯಗಳನ್ನು ಹೇಳಿದ್ದಾನೆ. ಪುರಾವೆಗಳು ಕೂಡಾ ಇವೆ ಎಂದು ಹ್ಯೂಮನ್ ರೈಟ್ಸ್ ಆರ್ಗನೈಝೇಶನ್ ಆಫ್ ಕೇರಳ ಅಧ್ಯಕ್ಷ ಉಮರ್ ಫಾರೂಕ್ ತಂಙಳ್ ಸಲ್ಲಿಸಿದ ಅಜಿಯನ್ನು ವಿಚಾರಣೆಗೆತ್ತಿಕೊಂಡ ಕೋರ್ಟು ಹೊಸ ವರದಿ ಸಲ್ಲಿಸುವಂತೆ ಸಿಬಿಐಗೆ ನಿರ್ದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News