ಬಿಜೆಪಿಯನ್ನು ನಾವು ಒಪ್ಪಿಕೊಳ್ಳದಿದ್ದರೂ, ಅವರನ್ನು ನಾವು ಸಹೋದರ ಸಹೋದರಿಯರೆಂದು ಭಾವಿಸುತ್ತೇವೆ: ರಾಹುಲ್ ಗಾಂಧಿ

Update: 2017-12-16 11:52 GMT

ಹೊಸದಿಲ್ಲಿ, ಡಿ.16: ಬಿಜೆಪಿಯನ್ನು  ನಾವು ಒಪ್ಪಿಕೊಳ್ಳದಿದ್ದರೂ, ನಾವು ಅವರನ್ನು  ಸಹೋದರ ಸಹೋದರಿಯರೆಂದು ಭಾವಿಸುತ್ತೇವೆ, ಕಾಂಗ್ರೆಸ್ ಯಾವತ್ತೂ ದ್ವೇಷದ ರಾಜಕಾರಣ ಮಾಡುವುದಿಲ್ಲ. ಪ್ರೀತಿ ಮತ್ತು ವಿಶ್ವಾಸದಿಂದ ಎಲ್ಲ ಸವಾಲುಗಳನ್ನು   ಕಾಂಗ್ರೆಸ್ ಎದುರಿಸುತ್ತದೆ ಎಂದು ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಹೊಸದಿಲ್ಲಿಯ 24 ಅಕ್ಬರ್ ರೋಡ್ ರಸ್ತೆಯಲ್ಲಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯಲ್ಲಿ  ಶನಿವಾರ ಬೆಳಗ್ಗೆ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ತಮ್ಮ ಮೊದಲ ಭಾಷಣದಲ್ಲಿ ನಾಯಕನಾಗಿ ಆಯ್ಕೆ ಮಾಡಲು ಸಹಕರಿಸಿದ ಕಾಂಗ್ರೆಸ್ ನ ಲಕ್ಷಾಂತರ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದರು.

ದೇಷದಿಂದ ಏನನ್ನು ಮಾಡಲು ಅಸಾಧ್ಯ.   ಬಿಜೆಪಿ ಜನರ  ಧ್ವನಿಯನ್ನು ಧಮನಿಸಿದರೂ, ಧ್ವನಿ ಇಲ್ಲದವರಿಗೆ  ನಾವು  ಮಾತನಾಡಲು ನಾವು ಅವಕಾಶ ಮಾಡಿಕೊಡುತ್ತೇವೆ. ಜನರ ಧ್ವನಿಯನ್ನು ನಾವು ಗೌರವಿಸುತ್ತೇವೆ. ನಮಗೆ ದ್ವೇಷದಿಂದ ಏನು ಮಾಡಲು ಸಾಧ್ಯವಿಲ್ಲ. ನಾವು ನಮ್ಮ ಸವಾಲುಗಳನ್ನು ಪ್ರೀತಿ ಮತ್ತು ವಿಶ್ವಾಸದೊಂದಿಗೆ ಎದುರಿಸಬೇಕಾಗಿದೆ. ಅಧಿಕಾರವನ್ನು ರಚನೆಗಳನ್ನು ನಿಯಂತ್ರಿಸಬಹುದು, ಆದರೆ ಜನರು ಅಧಿಕಾರ ನೀಡಿದ್ದಾರೆ ಎನ್ನುವುದನ್ನು ನಾವು ಮರೆಯಬಾರದು ಎಂದರು.

ಇದೇ ವೇಳೆ  ಅವರು ಭಾಷಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮೇಲೆ ವಾಗ್ದಾಳಿ ನಡೆಸಿದರು.

ದೇಶವನ್ನು ಮಧ್ಯಕಾಲಿನ ಯುಗಕ್ಕೆ ಕೊಂಡೊಯ್ಯುತ್ತಿರುವ ಪ್ರಧಾನಿ ಮೋದಿ

"ಪ್ರಧಾನ ಮಂತ್ರಿ  ನರೇಂದ್ರ ಮೋದಿ ಭಾರತವನ್ನು ಮಧ್ಯಕಾಲಿನ ಯುಗಕ್ಕೆ ಕೊಂಡೊಯ್ಯತ್ತಿದ್ದಾರೆ. ಪ್ರಸ್ತುತ ದೇಶದಲ್ಲಿ ತಿನ್ನುವ ಆಹಾರದ ವಿಷಯದಲ್ಲಿ   ಜನರನ್ನು ಕೊಲ್ಲಲಾಗುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ಬೆಂಕಿ ಹಚ್ಚಿದರೆ ಅದನ್ನು ನಂದಿಸುವುದು ತುಂಬಾ  ಕಷ್ಠ

"ನೀವು ಒಮ್ಮೆ  ಬೆಂಕಿ ಹಚ್ಚಿದರೆ ಅದನ್ನು ನಂದಿಸುವುದು ತುಂಬಾ ಕಷ್ಷ. ಈ ಮಾತನ್ನು ನಾನು ಬಿಜೆಪಿ ನಾಯಕರಲ್ಲಿ  ಹೇಳುತ್ತಿದ್ದೇನೆ.  ಯಾರು ಬೆಂಕಿ ಹಚ್ಚಿದರೂ  ಬೆಂಕಿಯನ್ನು  ನಂದಿಸಲು ಪ್ರಯತ್ನಿಸುತ್ತಿರುವ ಏಕೈಕ ಪಕ್ಷ ಕಾಂಗ್ರೆಸ್ ಆಗಿದೆ. ನಾವು   ದ್ವೇಷಿಸುವವರಿಗೆ  ಪ್ರೀತಿಯನ್ನು ಬೋಧಿಸುತ್ತೇವೆ. "

ಕಾಂಗ್ರೆಸ್ ಕಾರ್ಯಕರ್ತರು ನನ್ನ ಕುಟುಂಬ

ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ನನ್ನ ಕುಟುಂಬ. ಅವರನ್ನು ನಾನು ಹೃದಯಾಂತರಾಳದಿಂದ  ಪ್ರೀತಿಸುತ್ತೇನೆ.

ಲಕ್ಷಾಂತರ ಭಾರತೀಯರಂತೆ ನಾನೂ ಆದರ್ಶವಾದಿ

"ಲಕ್ಷಾಂತರ ಭಾರತೀಯರಂತೆ, ನಾನು ಆದರ್ಶವಾದಿ. ದೇಶದಲ್ಲಿ ಜನರ ಗಾಡವಾದ ನಂಬಿಕೆಯಿಂದಾಗಿ ನಾನು ರಾಜಕೀಯದಲ್ಲಿ ಸೇರಿಕೊಂಡಿದ್ದೇನೆ. ನಮ್ಮ ಕಾಲದಲ್ಲಿ ರಾಜಕೀಯವು  ದಯೆ ಮತ್ತು ಸತ್ಯವನ್ನು ಹೊಂದಿಲ್ಲ. ಜನಸಾಮಾನ್ಯರ ಬಗ್ಗೆ ಕಾಳಜಿಯಿಲ್ಲ. ರಾಜಕೀಯದಲ್ಲಿ ಸ್ವಾರ್ಥ ಸಾಧನೆಗಾಗಿ ಜನಸಾಮಾನ್ಯರನ್ನು ಬಳಸಲಾಗುತ್ತಿದೆ. ರಾಜಕೀಯ   ಜನ ಸಾಮಾನ್ಯರ ಅಭಿವೃದ್ಧಿಯ ಸಾಧನವಾಗಿ ಬಳಕೆಯಾಗಬೇಕು ಎಂದರು.

ಕಾಂಗ್ರೆಸ್ ಹಿರಿಯರ ಮತ್ತು ಯುವಕರ ಪಕ್ಷವಾಗಬೇಕು

"ಕಾಂಗ್ರಸ್ ಪಕ್ಷವನ್ನು  ಹಳೆಯ ಪಕ್ಷವೆಂದು  ಎಂದು ಕರೆಯಲಾಗುತ್ತದೆ. ಆದರೆ ಇದು ಬದಲಾಗಬೇಕು ಮುಂದೆ  ಇದು ಹಿರಿಯರ  ಮತ್ತು ಯುವಕರ ಪಕ್ಷವಾಗಬೇಕು. ನಾನು ಸಹಾನುಭೂತಿ ಮತ್ತು ಪರಸ್ಪರ ಪ್ರೀತಿಯ ಮೂಲಕ  ನವ ಭಾರತವನ್ನು ನಿರ್ಮಿಸಲು ಯುವಕರನ್ನು ಆಹ್ವಾನಿಸುತ್ತೇನೆ. "

ಅಧಿಕಾರ ದುರ್ಬಳಕೆಯಿಂದ  ವಿನಾಶ ಖಚಿತ

" ಅಧಿಕಾರ ದುರ್ಬಳಕೆಯಿಂದ  ವಿನಾಶ ಖಚಿತ.. ಬಿಜೆಪಿ  ಬೆದರಿಕೆಗೆ ಕಾಂಗ್ರೆಸ್ ಬಗ್ಗುವುದಿಲ್ಲ.  ನಾವು ದೇಶದ ಇತಿಹಾಸ, ಪ್ರಸ್ತುತ ಮತ್ತು ಭವಿಷ್ಯವನ್ನು ರಕ್ಷಿಸುತ್ತೇವೆ. "

ಸ್ವಾತಂತ್ರ್ಯದ ಕುರಿತು

"ಕಾಂಗ್ರೆಸ್  ಪ್ರತಿಯೊಬ್ಬ  ಭಾರತೀಯನ ಭಾವನೆಯನ್ನು  ಗೌರವಿಸುತ್ತದೆ.ಯಾರ ಬಗ್ಗೆಯೂ  ಮೌನವಾಗಿರುವುದಿಲ್ಲ. ನಾನು ಭಾರತದ ವೈಭವವನ್ನು ಪುನಃಸ್ಥಾಪಿಸಲು ಜಾಗೃತಿ ಭಾಗವಾಗಿರಲು ಬಯಸುತ್ತೇನೆ.

ಅಧ್ಯಕ್ಷತೆ ಸ್ವೀಕರಿಸಿ

"ನನ್ನ ರಾಜಕೀಯ ವೃತ್ತಿಜೀವನದ 13 ವರ್ಷಗಳಲ್ಲಿ, ನಾನು ಮನಮೋಹನ್ ಸಿಂಗ್ , ಸೋನಿಯಾ ಗಾಂಧಿ ಮತ್ತು ಪ್ರತಿಯೊಬ್ಬ  ಕಾಂಗ್ರೆಸ್ ಕಾರ್ಯಕರ್ತನಿಂದಲೂ ಸಾಕಷ್ಟು ಕಲಿತಿದ್ದೇನೆ. ನಿಮ್ಮ ಮಾರ್ಗದರ್ಶನಕ್ಕೆ  ಧನ್ಯವಾದಗಳು. ನಾನು ಯಾವಾಗಲೂ ನಿಮ್ಮ ಮಾರ್ಗದರ್ಶನದಲ್ಲಿ ಹೆಜ್ಜೆ ಇರಿಸುವೆ ಎಂದು ತಿಳಿದುಕೊಂಡು ನಾನು ಈ ಸ್ಥಾನಮಾನವನ್ನು ಒಪ್ಪಿಕೊಳ್ಳುತ್ತೇನೆ ಎಂದರು ರಾಹುಲ್ ಗಾಂಧಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News