ನಿರ್ಭಯಾ ಅತ್ಯಾಚಾರ, ಹತ್ಯೆಗೆ 5 ವರ್ಷ: ಮಹಿಳಾ ಸುರಕ್ಷೆಗೆ ಆಗ್ರಹಿಸಿ ಪ್ರತಿಭಟನೆ
ಹೊಸದಿಲ್ಲಿ, ಡಿ. 16: ಭಾರತದ ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆಯ ಕೊರತೆ ವಿರೋಧಿಸಿ ಸಾಂಕೇತಿಕ ಪ್ರತಿಭಟನೆಯಾಗಿ ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆಯಾದ 5ನೇ ವರ್ಷವಾದ ಡಿ. 29ರಂದು ಸಾರ್ವಜನಿಕ ಸ್ಥಳಗಳಲ್ಲಿ ತುಸು ನಿದ್ರೆ ಮಾಡಲು ರಾಷ್ಟ್ರಾದ್ಯಂತದ ಮಹಿಳೆಯರು ಯೋಜಿಸಿದ್ದಾರೆ.
ಈ ಸ್ವಯಂಪ್ರೇರಿತ ಅಭಿಯಾನವನ್ನು ‘ಮೀಟ್ ಟು ಸ್ಲೀಪ್’ ಎಂದು ಕರೆಯಲಾಗಿದೆ. ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಪ್ರತಿಭಟನಕಾರರು ಸಾರ್ವಜನಿಕ ಪಾರ್ಕ್‌ಗಳಿಗೆ ತೆರಳಿ ತುಸು ನಿದ್ರೆ ಮಾಡಲಿದ್ದಾರೆ. ಮಹಿಳೆಯರು ನಿರ್ಭಯಾಳನ್ನು ಮರೆತಿಲ್ಲ ಎಂಬುದು ಈ ಅಭಿಯಾನದ ಸಂದೇಶ.ಮಹಿಳೆಯ ವಿರುದ್ಧದ ಲೈಂಗಿಕ ಹಾಗೂ ಲಿಂಗಾಧರಿತ ಹಿಂಸಾಚಾರ ಮುಂದುವರಿದಿದೆ. ಇದನ್ನು ವಿರೋಧಿಸುತ್ತೇವೆ ಹಾಗೂ ಕ್ರಮ ಕೈಗೊಳ್ಳುತ್ತೇವೆ ಎಂದು ಅಭಿಯಾನದ ಸ್ಥಾಪಕಿ ಜಾಸ್ಮಿನ್ ಪಥೇಜಾ ತಿಳಿಸಿದ್ದಾರೆ.
ಐದು ವರ್ಷಗಳ ಹಿಂದೆ ಅರೆ ವೈದ್ಯಕೀಯ ವಿದ್ಯಾರ್ಥಿ ಅಭಯಾಳ ಅತ್ಯಾಚಾರ ಹಾಗೂ ಅಮಾನುಷ ಹತ್ಯೆಯನ್ನು ನೆನಪಿಸಿರುವ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಮಾಜ ಸುರಕ್ಷಿತವಾಗಿರಲು ನಿರ್ಧಾರ ತೆಗೆದುಕೊಳ್ಳಿ ಎಂದು ಆಗ್ರಹಿಸಿದ್ದಾರೆ.