ಚುನಾವಣೋತ್ತರ ಸಮೀಕ್ಷೆ ಅಸಂಬದ್ಧ: ಜಿಗ್ನೇಶ್ ಮೇವಾನಿ

Update: 2017-12-17 16:09 GMT

ವಡ್ಗಾಂವ್ (ಗುಜರಾತ್), ಡಿ. 17: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಖಚಿತವಾಗಿ ಅಡ್ಡಿ ಇತ್ತು ಎಂದು ಹೇಳುವ ಮೂಲಕ ವಡ್ಗಾಂವ್ ಕ್ಷೇತ್ರದ ಅಭ್ಯರ್ಥಿ ಹಾಗೂ ದಲಿತ ನಾಯಕ ಜಿಗ್ನೇಶ್ ಮೇವಾನಿ ಚುನಾವಣೋತ್ತರ ಸಮೀಕ್ಷೆಯನ್ನು ರವಿವಾರ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.

ಈ ಚುನಾವಣೋತ್ತರ ಸಮೀಕ್ಷೆ ನಕಲಿ ಹಾಗೂ ಅಸಂಬದ್ಧ. ಈ ಬಾರಿ ಬಿಜೆಪಿ ಖಂಡಿತವಾಗಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ಡಿಸೆಂಬರ್ 14ರಂದು ಅಂತ್ಯಗೊಂಡ ಎರಡು ಹಂತದ ಚುನಾವಣೆಯ ಬಳಿಕ ವಿವಿಧ ಮಾಧ್ಯಮಗಳ ಚುನಾವಣೋತ್ತರ ಸಮೀಕ್ಷೆ ಗುಜರಾತ್‌ನಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಭವಿಷ್ಯ ನುಡಿದಿದೆ.

ಹೆಚ್ಚಿನ ಚುನಾವಣೋತ್ತರ ಸಮೀಕ್ಷೆ ಬಿಜೆಪಿ ಗುಜರಾತ್‌ನ ಒಟ್ಟು 182 ಸ್ಥಾನಗಳಲ್ಲಿ 100 ಸ್ಥಾನಗಳನ್ನು ಪಡೆಯಲಿವೆ ಎಂದು ಹೇಳಿದೆ. ಗುಜರಾತ್ ವಿಧಾನ ಸಭಾ ಚುನಾವಣೆಯ ಫಲಿತಾಂಶ ನಾಳೆ ಘೋಷಣೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News