ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಅತ್ಯಂತ ಅರ್ಹ ವ್ಯಕ್ತಿ: ಶತ್ರುಘ್ನ ಸಿನ್ಹಾ

Update: 2017-12-17 16:16 GMT

ಹೊಸದಿಲ್ಲಿ, ಡಿ.17: ಕಾಂಗ್ರೆಸ್‌ನ ನೂತನ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಅಭಿನಂದನೆ ಸಲ್ಲಿಸುವ ಸಂದರ್ಭ ಕಾಂಗ್ರೆಸ್‌ಗೆ ದೀರ್ಘಾಯಷ್ಯ ಹಾರೈಸಿದ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾರ ನಡೆ ಹಲವರಲ್ಲಿ ಅಚ್ಚರಿ ಮೂಡಿಸಿದೆ. ಇದಲ್ಲದೆ ಸಿನ್ಹಾ, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಅತ್ಯಂತ ಅರ್ಹ ವ್ಯಕ್ತಿ ಎಂದು ಹೇಳಿದ್ದಾರೆ.

ಭಾರತದ ಅತ್ಯಂತ ಹಳೆಯ ಹಾಗೂ ಗೌರವಾನ್ವಿತ ಪಕ್ಷವಾದ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಅತ್ಯಂತ ಸಹಜ ಹಾಗೂ ಅರ್ಹ ವ್ಯಕ್ತಿ ರಾಹುಲ್ ಗಾಂಧಿ ಅಧಿಕಾರ ಸ್ವೀಕರಿಸಿದ್ದಾರೆ. ತಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪ್ರಜಾಪ್ರಭುತ್ವದ ಹಿತಾಸಕ್ತಿ ಹಿನ್ನೆಲೆೆಯಲ್ಲಿ ತಾನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ಗೆ ಕೂಡ ಅಭಿನಂದನೆ ಹೇಳುತ್ತೇನೆ ಎಂದು ಸಿನ್ಹಾ ಟ್ವೀಟ್ ಮಾಡಿದ್ದಾರೆ. ಸಿನ್ಹಾ ಅವರ ಹಾರೈಕೆಗೆ ರವಿವಾರ ಮರು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಅವರು, “ಶತ್ರುಘ್ನ ಸಿನ್ಹಾ ಜಿ ಅವರೇ, ನಿಮ್ಮ ಹಾರೈಕೆಗೆ ಕೃತಜ್ಞತೆ” ಎಂದಿದ್ದಾರೆ. ವಿವಿಧ ವಿಷಯಗಳಿಗೆ ಸಂಬಂಧಿಸಿ ಬಿಜೆಪಿಯನ್ನೇ ಟೀಕಿಸುವ ಮೂಲಕ 72 ಹರೆಯದ ಸಿನ್ಹಾ ಹಲವು ಬಾರಿ ಸುದ್ದಿಯಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News