ಏಕದಿನ ರ‍್ಯಾಂಕಿಂಗ್‌: ರೋಹಿತ್ ಶರ್ಮಾ ನಂ.5

Update: 2017-12-18 18:14 GMT

ದುಬೈ, ಡಿ.18: ಭಾರತದ ಆರಂಭಿಕ ದಾಂಡಿಗ ರೋಹಿತ್ ಶರ್ಮಾ ಐಸಿಸಿ ಏಕದಿನ ಬ್ಯಾಟ್ಸ್ ಮನ್‌ಗಳ ರ‍್ಯಾಂಕಿಂಗ್‌ನಲ್ಲಿ 5ನೇ ಸ್ಥಾನ ಪಡೆದಿದ್ದಾರೆ.

ರವಿವಾರ ಕೊನೆಗೊಂಡ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಅವರು 800 ಪಾಯಿಂಟ್ ದಾಟುವ ಮೂಲಕ ಮೊದಲ ಬಾರಿ ಐದನೇ ಸ್ಥಾನ ಪಡೆದಿದ್ದಾರೆ.

ರೋಹಿತ್ ಶರ್ಮಾ ಅವರು ಮೊಹಾಲಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ದ್ವಿಶತಕ (ಔಟಾಗದೆ 208)ದಾಖಲಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ದಾಖಲಿಸಿದ ದ್ವಿಶತಕಗಳ ಸಂಖ್ಯೆಯನ್ನು 3ಕ್ಕೆ ಏರಿಸಿದ್ದರು. ಇದರೊಂದಿಗೆ ಸರಣಿಯನ್ನು 816 ಪಾಯಿಂಟ್‌ಗಳೊಂದಿಗೆ ಕೊನೆಗೊಳಿಸಿದ್ದರು.

  ರೋಹಿತ್ ಶರ್ಮಾ ಅವರ ಜೊತೆಗಾರ ಶಿಖರ್ ಧವನ್ ಅವರು ವಿಶಾಖಪಟ್ಟಣದಲ್ಲಿ ಶತಕ ಸಿಡಿಸಿದ್ದರು. ಮೊಹಾಲಿಯಲ್ಲಿ ಶರ್ಮಾ ಜೊತೆ ಮೊದಲ ವಿಕೆಟ್‌ಗೆ 115 ರನ್‌ಗಳ ಜೊತೆಯಾಟ ನೀಡಿದ್ದರು. 68 ವೈಯಕ್ತಿಕ ಸ್ಕೋರ್ ದಾಖಲಿಸಿದ್ದರು. ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿರುವ ಧವನ್ ಅವರು ರ‍್ಯಾಂಕಿಂಗ್‌ನಲ್ಲಿ 14ನೇ ಸ್ಥಾನಕ್ಕೇರಿದ್ದಾರೆ. ಸರಣಿಯಲ್ಲಿ 6 ವಿಕೆಟ್‌ಗಳನ್ನು ಪಡೆದಿರುವ ಲೆಗ್-ಸ್ಪಿನ್ನರ್ ಯಜುವೇಂದ್ರ ಚಹಾಲ್ ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ 28ನೇ ಸ್ಥಾನ ,ಚೈನಾಮನ್ ಕುದೀಪ್ ಯಾದವ್ 56ನೇ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಜೀವನಶ್ರೇಷ್ಠ 45ನೇ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News