ಡಿಮಿಟ್ರೊವ್ ‘ಬಾಲ್ಕನ್ ವರ್ಷದ ಅಥ್ಲೀಟ್’

Update: 2017-12-18 18:19 GMT

ಬಲ್ಗೇರಿಯ, ಡಿ.18: ವಿಶ್ವದ ನಂ.3ನೇ ಟೆನಿಸ್ ಆಟಗಾರ ಗ್ರಿಗೊರ್ ಡಿಮಿಟ್ರೊವ್ ‘ಬಾಲ್ಕನ್ ವರ್ಷದ ಅಥ್ಲೀಟ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಬಲ್ಗೇರಿಯ ನ್ಯೂಸ್ ಏಜೆನ್ಸಿ(ಬಿಟಿಎ) ಸೋಮವಾರ ವರದಿ ಮಾಡಿದೆ.

ಡಿಮಿಟ್ರೊವ್ ಕಳೆದ ತಿಂಗಳು ಲಂಡನ್‌ನಲ್ಲಿ ಎಟಿಪಿ ಫೈನಲ್ಸ್ ಟೂರ್ನಿಯನ್ನುಜಯಿಸುವ ಮೂಲಕ ವೃತ್ತಿಜೀವನದಲ್ಲಿ ಪ್ರತಿಷ್ಠಿತ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದರು. ಈ ಪ್ರಶಸ್ತಿ ಜಯಿಸಿದ ಬಲ್ಗೇರಿಯದ ಮೊದಲ ಪುರುಷ ಆಟಗಾರ ಎನಿಸಿಕೊಂಡಿದ್ದರು. 2010ರಲ್ಲಿ ಸ್ಟ್ಯಾಂಕಾ ಝ್ಲಾಟೆವಾ ಎಟಿಪಿ ಫೈನಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದರು.

26ರ ಹರೆಯದ ಡಿಮಿಟ್ರೊವ್ ಈ ವರ್ಷ ಮೂರು ಟೂರ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಫ್ರೆಂಚ್ ಓಪನ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದರು. ಇನ್ನೋರ್ವ ಟೆನಿಸ್ ಆಟಗಾರ್ತಿ ಸಿಮೊನಾ ಹಾಲೆಪ್‌ರನ್ನು ಸ್ಪರ್ಧೆಯಲ್ಲಿ ಹಿಂದಿಕ್ಕುವ ಮೂಲಕ ಡಿಮಿಟ್ರೊವ್ ಬಾಲ್ಕನ್ ಪ್ರಶಸ್ತಿ ಜಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News