ಭಾರತ - ಲಂಕಾ 3ನೇ ಏಕದಿನ ಹೈಲೈಟ್ಸ್

Update: 2017-12-18 18:27 GMT

ವಿಶಾಖಪಟ್ಟಣ, ಡಿ.18: ಕಳೆದ 35 ವರ್ಷಗಳ ಅವಧಿಯಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಆಡಿರುವ 10 ದ್ವಿಪಕ್ಷೀಯ ಏಕದಿನ ಸರಣಿಗಳಲ್ಲಿ ಭಾರತ 9ರಲ್ಲಿ ಜಯ ಗಳಿಸಿದೆ. 1 ಸರಣಿ ಡ್ರಾದಲ್ಲಿ ಕೊನೆಗೊಂಡಿದೆ.

ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದ ಹೈಲೈಟ್ಸ್

►ಕಳೆದ ವರ್ಷ ಆಸ್ಟ್ರೇಲಿಯ ವಿರುದ್ಧ ಭಾರತ 1-4 ಅಂತರದಲ್ಲಿ ಸೋಲು ಅನುಭವಿಸಿದ ಬಳಿಕ ಸತತ 8 ದ್ವಿಪಕ್ಷೀಯ ಸರಣಿಗಳಲ್ಲಿ ಜಯ ಗಳಿಸಿದೆ.

►ವೆಸ್ಟ್ ಇಂಡೀಸ್ 1980 ಮತ್ತು 1988ರ ಅವಧಿಯಲ್ಲಿ 14 ದ್ವಿಪಕ್ಷೀಯ ಸರಣಿಗಳಲ್ಲಿ ಜಯ ಗಳಿಸಿತ್ತು.

►ಶ್ರೀಲಂಕಾ ವಿರುದ್ಧ ಭಾರತ ತವರಿನಲ್ಲಿ 51 ಏಕದಿನ ಪಂದ್ಯಗಳನ್ನು ಆಡಿದೆ. ಈ ಪೈಕಿ 36ರಲ್ಲಿ ಜಯ ಗಳಿಸಿದೆ. 12ರಲ್ಲಿ ಸೋಲು ಅನುಭವಿಸಿದೆ. ಉಳಿದ ಮೂರು ಪಂದ್ಯಗಳು ಫಲಿತಾಂಶವಿಲ್ಲದೆ ರದ್ದಾಗಿದೆ.

►2017ರಲ್ಲಿ ಭಾರತ ಆಡಿರುವ 29 ಏಕದಿನ ಪಂದ್ಯಗಳಲ್ಲಿ 21ರಲ್ಲಿ ಜಯ ಗಳಿಸಿದೆ. 7ರಲ್ಲಿ ಸೋಲು ಮತ್ತು 1 ಪಂದ್ಯ ರದ್ದಾಗಿದೆ.

►ಶ್ರೀಲಂಕಾ 2017ರಲ್ಲಿ ಆಡಿರುವ 29 ಪಂದ್ಯಗಳ ಪೈಕಿ 23ರಲ್ಲಿ ಸೋಲು ಅನುಭವಿಸಿದೆ. 5ರಲ್ಲಿ ಜಯ ಗಳಿಸಿದೆ. 1 ಪಂದ್ಯ ರದ್ದಾಗಿದೆ.

►ಶಿಖರ್ ಧವನ್ 85 ಎಸೆತಗಳಲ್ಲಿ ಅಜೇಯ 100 ರನ್ ಗಳಿಸಿದ್ದಾರೆ. ಇದು ಅವರ 12ನೇ ಏಕದಿನ ಶತಕ.

►ಧವನ್ 95 ಇನಿಂಗ್ಸ್‌ಗಳಲ್ಲಿ 4 ಸಾವಿರ ರನ್ ಪೂರ್ಣಗೊಳಿಸಿದ್ದಾರೆ. ದಕ್ಷಿಣ ಆಫ್ರಿಕದ ಹಾಶಿಮ್ ಅಮ್ಲ 81, ವೆಸ್ಟ್‌ಇಂಡೀಸ್‌ನ ರಿಚರ್ಡ್ಸ್ 88 , ಇಂಗ್ಲೆಂಡ್‌ನ ಜೋ ರೂಟ್ 91, ಭಾರತದ ವಿರಾಟ್ ಕೊಹ್ಲಿ 93 ಮತ್ತು ಆಸ್ಟ್ರೇಲಿಯದ ಡೇವಿಡ್ ವಾರ್ನರ್ 93 ಇನಿಂಗ್ಸ್‌ಗಳಲ್ಲಿ 4 ಸಾವಿರ ರನ್ ಪೂರೈಸಿದ್ದರು.

►ಧವನ್ 95 ಇನಿಂಗ್ಸ್‌ಗಳಲ್ಲಿ 12 ಶತಕ ಪೂರ್ಣಗೊಳಿಸಿದ್ದರು. ಕ್ವಿಂಟನ್ ಡಿ ಕಾಕ್ 74 ಇನಿಂಗ್ಸ್ ಅಮ್ಲ 81 , ಕೊಹ್ಲಿ 83 ಮತ್ತು ಡೇವಿಡ್ ವಾರ್ನರ್ 90 ಇನಿಂಗ್ಸ್‌ಗಳಲ್ಲಿ 12 ಶತಕ ದಾಖಲಿಸಿದ್ದರು.

►ಧವನ್ ಮೂರನೇ ಬಾರಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

►ಕುಲ್‌ದೀಪ್ ಯಾದವ್ 42ಕ್ಕೆ 3 ವಿಕೆಟ್ ಪಡೆಯುವ ಮೂಲಕ ಎರಡನೇ ಬಾರಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಜೂ.30, 2017ರಲ್ಲಿ ನಾರ್ಥ್‌ಸೌಂಡ್‌ನಲ್ಲಿ ವಿಂಡೀಸ್ ವಿರುದ್ಧ ಕುಲ್‌ದೀಪ್ 41ಕ್ಕೆ 3 ವಿಕೆಟ್ ಪಡೆದಿದ್ದರು.

►ಕುಲ್‌ದೀಪ್ ಯಾದವ್ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಮೊದಲ ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

►ಉಪುಲ್ ತರಂಗ (95) ಭಾರತದ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ 6ನೇ ಬಾರಿ ಮತ್ತು ಒಟ್ಟು 36ನೇ ಅರ್ಧಶತಕ ಜಮೆ ಮಾಡಿದ್ದಾರೆ.

►ತರಂಗ 25 ಏಕದಿನ ಪಂದ್ಯಗಳಲ್ಲಿ 1,000 ರನ್(1,011) ಪೂರ್ಣಗೊಳಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 6 ಅರ್ಧಶತಕಗಳು ಸೇರಿವೆ. ಈ ವರ್ಷ ಸಾವಿರ ರನ್ ಪೂರ್ಣಗೊಳಿಸಿದ ಶ್ರೀಲಂಕಾದ ಮೊದಲ ಹಾಗೂ ವಿಶ್ವದ 3ನೇ ಬ್ಯಾಟ್ಸ್‌ಮನ್ ತರಂಗ. ಭಾರತದ ವಿರಾಟ್ ಕೊಹ್ಲಿ 1,460 ರನ್ ಮತ್ತು ರೋಹಿತ್ ಶರ್ಮಾ 1,293 ರನ್ ಪೂರ್ಣಗೊಳಿಸಿದ್ದಾರೆ.

►ಮೂರನೇ ಏಕದಿನ ಪಂದ್ಯವನ್ನಾಡಿದ ಸದೀರ ಸಮರವಿಕ್ರಮ (42) ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಶಾರ್ಜಾದಲ್ಲಿ ಪಾಕಿಸ್ತಾನ ವಿರುದ್ಧ ಆಡಿದ್ದ ಎರಡೂ ಪಂದ್ಯಗಳಲ್ಲಿ ಖಾತೆ ತೆರೆಯದೆ ಸೊನ್ನೆ ಸುತ್ತಿದ್ದರು.

►ಶ್ರೇಯಸ್ ಅಯ್ಯರ್(65) ಎರಡನೇ ಏಕದಿನ ಅರ್ಧಶತಕ ದಾಖಲಿಸಿದ್ದಾರೆ. ಮೊಹಾಲಿಯಲ್ಲಿ ಅವರು 88 ರನ್ ಗಳಿಸಿದ್ದಾರೆ.

►ಗುಣತಿಲಕ ಮತ್ತು ತರಂಗ ಎರಡನೇ ವಿಕೆಟ್‌ಗೆ 121 ರನ್‌ಗಳ ಜೊತೆಯಾಟ ನೀಡಿದ್ದರು. ಇದು ಭಾರತದ ವಿರುದ್ಧ ಶ್ರೀಲಂಕಾದ 5ನೇ ಶತಕದ ಜೊತೆಯಾಟವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News