×
Ad

1,500 ರನ್ ಪೂರೈಸಿದ ರೋಹಿತ್ ಶರ್ಮ

Update: 2017-12-20 23:59 IST

ಕಟಕ್, ಡಿ.20: ರೋಹಿತ್ ಶರ್ಮ ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 1,500 ರನ್ ಪೂರೈಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಭಾರತದ ನಾಯಕ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ ಮೊದಲಿಗನಾಗಿದ್ದಾರೆ.

ಶ್ರೀಲಂಕಾ ವಿರುದ್ಧದ ಮೊದಲ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮುಂಬೈ ಆಟಗಾರ ರೋಹಿತ್ ಈ ಮೈಲುಗಲ್ಲು ತಲುಪಿದ್ದಾರೆ. ಬಲಗೈ ಬ್ಯಾಟ್ಸ್‌ಮನ್ ರೋಹಿತ್ ಬೌಂಡರಿ ಬಾರಿಸುವ ಮೂಲಕ 1,500 ರನ್ ಪೂರೈಸಿದರು. ಆದರೆ 17 ರನ್ ಗಳಿಸಿದ ವೇಳೆ ರೋಹಿತ್ ಮ್ಯಾಥ್ಯೂಸ್‌ಗೆ ವಿಕೆಟ್ ಒಪ್ಪಿಸಿದರು.

ರೋಹಿತ್ 69 ಟ್ವೆಂಟಿ-20 ಪಂದ್ಯಗಳಲ್ಲಿ 30.04ರ ಸರಾಸರಿಯಲ್ಲಿ 1 ಶತಕ ಹಾಗೂ 12 ಅರ್ಧಶತಕಗಳನ್ನು ಸಿಡಿಸಿದ್ದಾರೆ. ರೋಹಿತ್ ಟ್ವೆಂಟಿ-20 ಇತಿಹಾಸದಲ್ಲಿ 1,500 ರನ್ ಗಳಿಸಿದ ವಿಶ್ವದ 14ನೇ ಕ್ರಿಕೆಟಿಗನಾಗಿದ್ದಾರೆ.

ಕೊಹ್ಲಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 52.86ರ ಸರಾಸರಿಯಲ್ಲಿ 18 ಅರ್ಧಶತಕಗಳ ಸಹಿತ 1,956 ರನ್ ಗಳಿಸಿದ್ದಾರೆ. ಟ್ವೆಂಟಿ-20 ಕ್ರಿಕೆಟ್‌ನಗರಿಷ್ಠ ಸ್ಕೋರರ್ ಪಟ್ಟಿಯಲ್ಲಿ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ನ್ಯೂಝಿಲೆಂಡ್‌ನ ಬ್ರೆಂಡನ್ ವೆುಕಲಮ್ 70 ಟ್ವೆಂಟಿ-20 ಪಂದ್ಯಗಳಲ್ಲಿ 2,140 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News