ಉಳ್ಳಾಲ‌: ಸೋಶಿಯಲ್ ಡೆಮಾಕ್ರಟಿಕ್ ಆಟೋ ಯೂನಿಯನ್ ಅಸ್ಥಿತ್ವಕ್ಕೆ

Update: 2017-12-21 07:11 GMT

ಉಳ್ಳಾಲ, ಡಿ. 21: ಉಳ್ಳಾಲ ನಗರ ಸಭೆಯ ಸಮುದಾಯದಲ್ಲಿ ಮಂಗಳೂರು ಕ್ಷೇತ್ರ ಸಮಿತಿಯಿಂದ ನಡೆದ ಅಟೋ ರಿಕ್ಷಾ ಚಾಲಕರ ಸ್ನೇಹ ಕೂಟದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಅಟೋ ಯೂನಿಯನ್ ಉಳ್ಳಾಲ‌ನಗರ ಸಭಾ ಸಮಿತಿ ರಚಿಸಲಾಯಿತು.

ಈ ಸ್ನೇಹ ಕೂಟದ ಅಧ್ಯಕ್ಷತೆಯನ್ನು ಎಸ್ಡಿಪಿಐ ಮಂಗಳೂರು ಕ್ಷೇತ್ರದ ಅಧ್ಯಕ್ಷ ಅಬ್ಬಾಸ್ ಕಿನ್ಯ ವಹಿಸಿದರು. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಳ್ಳಾಲ ನಗರ ಸಭಾ ಕಾರ್ಯದರ್ಶಿ ಮುಹಮ್ಮದ್ ಯು.ಬಿ. ಪ್ರಸ್ತಾವಿಕ ಭಾಷಣ ಮಾಡಿದರು, ಸೋಶಿಯಲ್ ಡೆಮಾಕ್ರಟಿಕ್ ಆಟೋ ಯೂನಿಯನ್ ಇದರ ಜಿಲ್ಲಾ ಸಂಚಾಲಕ ಯೂಸುಫ್ ಆಲಡ್ಕ  ವಿಷಯ ಮಂಡನೆ ಮಾಡಿದರು. ಸೋಶಿಯಲ್ ಡೆಮಾಕ್ರಟಿಕ್ ಆಟೋ ಯೂನಿಯನ್ ಜಿಲ್ಲಾ ಮುಖಂಡ ಅಶ್ರಫ್ ಮಂಚಿ  ಚಾಲಕರಿಗೆ ಯೂನಿಯನ್ ನ ಅಗತ್ಯತೆಯನ್ನು ಸಭೆಯಲ್ಲಿ ತಿಳಿಸಿಕೊಟ್ಟರು.

ಚುನಾವಣಾ ಪ್ರಕ್ರಿಯೆಯ ಮೂಲಕ ಉಳ್ಳಾಲ ನಗರ ಸಮಿತಿಯನ್ನು ಅಸ್ಥಿತ್ವಕ್ಕೆ ತರಲಾಯಿತು. ಕಲೀಲ್ ಮೇಲಂಗಡಿಯವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಹೈದರ್ ತೊಕ್ಕೋಟು ಇವರನ್ನು  ಕಾರ್ಯದರ್ಶಿಯನ್ನಾಗಿ ಮಾಡಲಾಯಿತು ಮತ್ತು ಒಟ್ಟು ಒಂಭತ್ತು ಪದಾಧಿಕಾರಿಗಳನ್ನು ರಚಿಸಲಾಯಿತು.

ಕಾರ್ಯಕ್ರಮದ ಕೊನೆಯಲ್ಲಿ ಅಟೋ ರಿಕ್ಷಾ ಚಾಲಕರ ಸಮಸ್ಯೆ ಮತ್ತು ಅದಕ್ಕೆ ಬೇಕಾದಂತಹ ಪರಿಹಾರದ ಬಗ್ಗೆ  ಚರ್ಚಿಸಲಾಯಿತು. ಅಟೋ ರಿಕ್ಷಾ ಚಾಲಕರಿಗೆ ಅಧಿಕಾರಿಗಳು ಕೊಡುವಂತಹ ಕಿರುಕುಳದ ಬಗ್ಗೆ ಮತ್ತು ಅವರಿಗೆ ಸಿಗುವಂತಹ ಸವಲತ್ತುಗಳನ್ನು  ಅಧಿಕಾರಿಗಳ ನಿರ್ಲಕ್ಷ್ಯತನದ ಬಗ್ಗೆ  ಸಭೆಯಲ್ಲಿ ಚರ್ಚಿಸಲಾಯಿತು.

ಸಮಾರೋಪ ಭಾಷಣವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಳ್ಳಾಲ ನಗರ ಸಭಾ ಸಮಿತಿಯ ಅಧ್ಯಕ್ಷ ಅಬ್ಬಾಸ್ ಎ.ಆರ್.  ಮಾಡಿದರು, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಳ್ಳಾಲ ನಗರ ಸಮಿತಿಯ ಸದಸ್ಯ ಸಲೀಮ್  ವಂದಸಿದರು. ಸೋಶಿಯಲ್ ಡೆಮಾಕ್ರಟಿಕ್ ಆಟೋ ಯೂನಿಯನ್ ಮಂಗಳೂರು ಕ್ಷೇತ್ರದ ಸಂಚಾಲಕ ಹಸೈನಾರ್ ಕೋಣಾಜೆ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News