ಆಹಾರದಲ್ಲಿ ಜಿರಳೆ: ಕ್ಷಮೆ ಕೋರಿದ ಏರ್ ಇಂಡಿಯಾ

Update: 2017-12-21 14:09 GMT

ಪಣಜಿ, ಡಿ. 20: ದಿಲ್ಲಿ ವಿಮಾನ ನಿಲ್ದಾಣದ ಏರ್ ಇಂಡಿಯಾದ ಲಾಂಜ್‌ನಲ್ಲಿ ಪ್ರೀಮಿಯಮ್ ಪ್ರಯಾಣಿಕರಿಗೆ ಪೂರೈಸಲಾದ ಆಹಾರದ ಪ್ಲೇಟ್‌ನಲ್ಲಿ ಜಿರಳೆ ಇದ್ದ ಬಗ್ಗೆ ಪ್ರಯಾಣಿಕರೋರ್ವರು ಟ್ವಿಟರ್ ಮೂಲಕ ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಕ್ಷಮೆ ಯಾಚಿಸಿದೆ.

“ಆತ್ಮೀಯ ಏರ್ ಇಂಡಿಯ ದಿಲ್ಲಿಯಲ್ಲಿರುವ ಲಾಂಜ್‌ನಲ್ಲಿ ಬ್ಯುಸಿನೆಸ್ ಹಾಗೂ ಫಸ್ಟ್ ಕ್ಲಾಸ್ ಪ್ರಯಾಣಿಕರಿಗೆ ಪೂರೈಸಿದ ಆಹಾರದಲ್ಲಿ ಜಿರಳೆಗಳು ಇದ್ದುವು” ಎಂದು ವೃತ್ತಿಯಲ್ಲಿ ಪತ್ರಕರ್ತರಾಗಿರುವ ಹರಿಂದರ್ ಬವೇಜಾ ಟ್ವೀಟ್ ಮಾಡಿದ್ದಾರೆ. ಪ್ಲೇಟ್‌ನ ಆಹಾರದಲ್ಲಿ ಜಿರಳೆ ಇರುವ ಫೋಟೊವನ್ನು ಟ್ವೀಟ್‌ನೊಂದಿಗೆ ಅವರು ಪೋಸ್ಟ್ ಮಾಡಿದ್ದಾರೆ.

ಮೈಕ್ರೊ ಬ್ಲಾಗಿಂಗ್ ಸೈಟ್‌ನಲ್ಲಿ ಈ ಬಗ್ಗೆ ಕ್ಷಮೆ ಯಾಚಿಸಿರುವ ಏರ್ ಇಂಡಿಯಾ, ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಕ್ಯಾಟರಿಂಗ್ ಸೇವೆ ನೀಡುತ್ತಿರುವರಿಗೆ ಸೂಚಿಸಲಾಗಿದೆ ಎಂದಿದೆ.

ಈ ವರ್ತಮಾನ ಕೇಳಲು ನಮಗೆ ವಿಷಾದ ಎನಿಸುತ್ತದೆ. ಅಗತ್ಯವಿರುವ ಕ್ರಮಗಳನ್ನು ಕೂಡಲೇ ತೆಗೆದುಕೊಳ್ಳಲಾಗುವುದು. ಘಟನೆಗೆ ನಾವು ಕ್ಷಮೆ ಕೋರುತ್ತೇವೆ ಎಂದು ಏರ್ ಇಂಡಿಯಾ ಸರಣಿ ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News