ಬಂಧನದಲ್ಲಿರುವ 291 ಭಾರತೀಯರ ಬಿಡುಗಡೆ: ಪಾಕ್
Update: 2017-12-21 21:57 IST
ಇಸ್ಲಾಮಾಬಾದ್, ಡಿ. 21: ಪಾಕಿಸ್ತಾನದ ಜಲಪ್ರದೇಶವನ್ನು ಉಲ್ಲಂಘಿಸಿದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ 291 ಭಾರತೀಯ ಮೀನುಗಾರರನ್ನು ಸದ್ಭಾವನೆಯ ದ್ಯೋತಕವಾಗಿ ಬಿಡುಗಡೆ ಮಾಡಲಾಗುವುದು ಎಂದು ಪಾಕಿಸ್ತಾನ ಗುರುವಾರ ತಿಳಿಸಿದೆ.
ಮೀನುಗಾರರನ್ನು ಎರಡು ಹಂತಗಳಲ್ಲಿ, ಅಂದರೆ ಡಿಸೆಂಬರ್ 29 ಮತ್ತು ಜನವರಿ 8ರಂದು ವಾಘಾ ಗಡಿ ಮೂಲಕ ಬಿಡುಗಡೆ ಮಾಡಲಾಗುವುದು ಎಂದು ಪಾಕಿಸ್ತಾನದ ವಿದೇಶ ಕಚೇರಿಯ ವಕ್ತಾರ ಮುಹಮ್ಮದ್ ಫೈಝಲ್ ಹೇಳಿದರು.
ಇದಕ್ಕೂ ಮೊದಲು, ಅಕ್ಟೋಬರ್ 27ರಂದು ಪಾಕಿಸ್ತಾನ 68 ಭಾರತೀಯ ಮೀನುಗಾರರನ್ನು ಬಿಡುಗಡೆಗೊಳಿಸಿತ್ತು.