×
Ad

ಕೊಹ್ಲಿ-ಅನುಷ್ಕಾ ಮದುವೆ ಆರತಕ್ಷತೆಗೆ ಹಾಜರಾದ ಪ್ರಧಾನಿ ಮೋದಿ

Update: 2017-12-21 22:56 IST

ಹೊಸದಿಲ್ಲಿ, ಡಿ.21: ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮ ಅವರ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ಹಾಜರಾಗಿ ಶುಭ ಹಾರೈಸಿದರು.

ಮದುವೆ ಆರತಕ್ಷತೆ ಕಾರ್ಯಕ್ರಮ ತಾಜ್ ಪ್ಯಾಲೇಸ್ ಹೊಟೇಲ್‌ನಲ್ಲಿ ನಡೆದಿದ್ದು ಕೊಹ್ಲಿ-ಅನುಷ್ಕಾ ಡಿ.11 ರಂದು ಇಟಲಿಯಲ್ಲಿ ಸಬಂಧಿಕರು, ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾಗಿದ್ದರು. ವಿರಾಟ್ ಕೊಹ್ಲಿ ಶೆರ್ವಾನಿ ಧರಿಸಿದ್ದರೆ, ಅನುಷ್ಕಾ ಕೆಂಪು ಹಾಗೂ ಚಿನ್ನದ ಬಣ್ಣ ಸೀರೆ ಧರಿಸಿದ್ದರು.

ಕೊಹ್ಲಿ-ಅನುಷ್ಕಾ ದಂಪತಿ  ಮುಂಬೈಯಲ್ಲಿ ಡಿ.26 ರಂದು ಮತ್ತೊಂದು ರಿಸೆಪ್ಶನ್ ಕಾರ್ಯಕ್ರಮ ಆಯೋಜಿಸಿದ್ದು, ಆನಂತರ ದಕ್ಷಿಣ ಆಫ್ರಿಕಕ್ಕೆ ತೆರಳಲಿದೆ. ಕೊಹ್ಲಿ ದಕ್ಷಿಣ ಆಫ್ರಿಕಕ್ಕೆ ಕ್ರಿಕೆಟ್ ಸರಣಿ ಆಡಲು ತೆರಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News