×
Ad

2022ರ ಕಾಮನ್‌ವೆಲ್ತ್ ಗೇಮ್ಸ್‌ಗೆ ಬರ್ಮಿಂಗ್‌ಹ್ಯಾಮ್ ಆತಿಥ್ಯ

Update: 2017-12-21 23:43 IST

ಲಂಡನ್, ಡಿ.21: ಬಿಡ್ಡಿಂಗ್ ಪ್ರಕ್ರಿಯೆಗೆ ಸಂಬಂಧಿಸಿ ಸಮಸ್ಯೆ ಎದುರಿಸುತ್ತಿದ್ದ ಇಂಗ್ಲೆಂಡ್‌ನ ನಗರ ಬರ್ಮಿಂಗ್‌ಹ್ಯಾಮ್ 2022ರ ಕಾಮನ್‌ವೆಲ್ತ್ ಗೇಮ್ಸ್‌ನ ಆತಿಥ್ಯವಹಿಸಿಕೊಳ್ಳುವುದು ಗುರುವಾರ ದೃಢಪಟ್ಟಿದೆ.

‘‘ನಾವು ಬರ್ಮಿಂಗ್‌ಹ್ಯಾಮ್ ಹಾಗೂ ಇಂಗ್ಲೆಂಡ್ ನಗರಕ್ಕೆ ಕಾಮನ್‌ವೆಲ್ತ್ ಗೇಮ್ಸ್ ಆಯೋಜನೆಗೆ ಭವ್ಯ ಸ್ವಾಗತ ನೀಡುತ್ತಿದ್ದೇವೆ’’ ಎಂದು ಕಾಮನ್‌ವೆಲ್ತ್ ಗೇಮ್ಸ್ ಫೆಡರೇಶನ್ ಅಧ್ಯಕ್ಷ ಲೂಯಿಸ್ ಮಾರ್ಟಿನ್ ಬರ್ಮಿಂಗ್‌ಹ್ಯಾಮ್ ಅಕಾಡಮಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

 2022ರ ಗೇಮ್ಸ್ ಆತಿಥ್ಯದ ಹಕ್ಕನ್ನು ಈ ಹಿಂದೆ 2015ರಲ್ಲಿ ದಕ್ಷಿಣ ಆಫ್ರಿಕದ ಡರ್ಬನ್ ನಗರಕ್ಕೆ ನೀಡಲಾಗಿತ್ತು. ಆದರೆ, ಹಣಕಾಸು ಸಮಸ್ಯೆಯಿಂದಾಗಿ ಡರ್ಬನ್ ಟೂರ್ನಿ ಆತಿಥ್ಯದಿಂದ ಹಿಂದೆ ಸರಿದಿತ್ತು. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಕಾಮನ್‌ವೆಲ್ತ್ ಗೇಮ್ಸ್ 2014ರಲ್ಲಿ ಇಂಗ್ಲೆಂಡ್‌ನ ಗ್ಲಾಸ್ಗೊದಲ್ಲಿ ನಡೆದಿತ್ತು. 2018ರ ಕಾಮನ್‌ವೆಲ್ತ್ ಗೇಮ್ಸ್ ಆಸ್ಟ್ರೇಲಿಯದ ಗೋಲ್ಡ್‌ಕೋಸ್ಟ್‌ನಲ್ಲಿನಡೆಯಲಿದೆ. ಡರ್ಬನ್ ನಗರ ಗೇಮ್ಸ್ ಆಯೋಜನೆಯಿಂದ ಹಿಂದೆ ಸರಿದಾಗ ಬರ್ಮಿಂಗ್‌ಹ್ಯಾಮ್ ನಗರ ಸೆಪ್ಟಂಬರ್‌ನಲ್ಲಿ ನಡೆದ ಬಿಡ್‌ನಲ್ಲಿ ಲಿವರ್‌ಪೂಲ್ ನಗರವನ್ನು ಸೋಲಿಸಿ ಆತಿಥ್ಯದ ಹಕ್ಕು ಪಡೆದಿತ್ತು.

2022ರ ಜು.27 ರಿಂದ ಆಗಸ್ಟ್ 7ರ ತನಕ ನಡೆಯಲಿರುವ ಗೇಮ್ಸ್‌ಗೆ 750 ಮಿಲಿಯನ್ ಪೌಂಡ್ ಬಜೆಟ್ ನಿಗದಿಪಡಿಸಲಾಗಿದೆ. ಈಗಿರುವ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ನವೀಕರಣಗೊಳಿಸಿ ಅಥ್ಲೆಟಿಕ್ಸ್ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News