×
Ad

ಫಿಫಾ ರ‍್ಯಾಂಕಿಂಗ್‌ ಭಾರತಕ್ಕೆ 105ನೇ ಸ್ಥಾನ

Update: 2017-12-21 23:56 IST

ಹೊಸದಿಲ್ಲಿ, ಡಿ.21: ಭಾರತದ ಫುಟ್ಬಾಲ್ ತಂಡ ನವೆಂಬರ್‌ನಿಂದ ಫಿಫಾ ರ‍್ಯಾಂಕಿಂಗ್‌ನಲ್ಲಿ 105ನೇ ಸ್ಥಾನವನ್ನು ಉಳಿಸಿಕೊಳ್ಳುವುದರೊಂದಿಗೆ 2017ರ ಋತುವನ್ನು ಕೊನೆಗೊಳಿಸಿದೆ.

ಭಾರತ ಈ ವರ್ಷ 170 ರಿಂದ 105ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಅಗ್ರ-100ರಲ್ಲಿ ಸ್ವಲ್ಪ ಸಮಯ ಸ್ಥಾನ ಪಡೆದಿದ್ದ ಭಾರತ ಎಎಫ್‌ಸಿ ಕಪ್ ಕ್ವಾಲಿಫೈಯರ್‌ನಲ್ಲಿ ಮ್ಯಾನ್ಮಾರ್ ವಿರುದ್ಧ ಡ್ರಾ ಸಾಧಿಸಿರುವುದು ಹಾಗೂ ಕೆಲವು ಪಂದ್ಯಗಳನ್ನು ಆಡದೇ ಇದ್ದ ಕಾರಣ ಮತ್ತೆ ಅಗ್ರ-100ರಿಂದ ಹೊರಗುಳಿದಿತ್ತು.

 ಮೂರನೇ ಸುತ್ತಿನಲ್ಲಿ ಮೊದಲ 4 ಪಂದ್ಯಗಳನ್ನು ಜಯಿಸುವ ಮೂಲಕ ಭಾರತ 2019ರ ಎಎಫ್‌ಸಿ ಏಷ್ಯನ್ ಕಪ್‌ಗೆ ಅರ್ಹತೆ ಖಚಿತಪಡಿಸಿಕೊಂಡಿತ್ತು. ಭಾರತ 3ನೇ ಸುತ್ತಿನಲ್ಲಿ ಅಜೇಯವಾಗುಳಿದಿದೆ.

ವಿಶ್ವ ಚಾಂಪಿಯನ್ ಜರ್ಮನಿ ನಂ.1 ಸ್ಥಾನ ಉಳಿಸಿಕೊಂಡಿದ್ದು ಫಿಫಾ ವರ್ಷದ ತಂಡವಾಗಿ ಹೊರಹೊಮ್ಮಿದೆ. ಜರ್ಮನಿ ಮಾಸ್ಕೊದಲ್ಲಿ 2018ರಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಈಗಾಗಲೇ ಅರ್ಹತೆ ಪಡೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News