ರೋಹಿತ್ ಶರ್ಮಾ ವೇಗದ ಶತಕ

Update: 2017-12-22 14:43 GMT

ಇಂದೋರ್, ಡಿ.22: ಶ್ರೀಲಂಕಾ ವಿರುದ್ಧದ ಎರಡನೇ ಟ್ವೆಂಟಿ-20 ಪಂದ್ಯದಲ್ಲಿ ಶುಕ್ರವಾರ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ವೇಗದ ಶತಕ ದಾಖಲಿಸಿದ್ದಾರೆ.
  ರೋಹಿತ್ ಶರ್ಮಾ 35 ಎಸೆತಗಳಲ್ಲಿ 11 ಬೌಂಡರಿ ಮತ್ತು 8 ಸಿಕ್ಸರ್ ಸಹಾಯದಿಂದ ಎರಡನೇ ಚೊಚ್ಚಲ ಶತಕ ದಾಖಲಿಸಿದರು. ಇದು ಭಾರತದ ಪರ ವೇಗದ ಶತಕವಾಗಿದೆ. ದಕ್ಷಿಣ ಆಫ್ರಿಕದ ಡೇವಿಡ್ ಮಿಲ್ಲರ್ ಅವರ ವೇಗದ ಶತಕದ ದಾಖಲೆಯನ್ನು ಶರ್ಮಾ ಸರಿಗಟ್ಟಿದ್ದಾರೆ. ಲೋಕೇಶ್ ರಾಹುಲ್ ಜೊತೆ ಮೊದಲ ವಿಕೆಟ್‌ಗೆ ರೋಹಿತ್ ಶರ್ಮಾ 165 ರನ್‌ಗಳ ಜೊತೆಯಾಟ ನೀಡಿದರು. ರೋಹಿತ್ ಶರ್ಮಾ 118 ರನ್(43ಎ, 12ಬೌ, 10 ಸಿ) ಗಳಿಸಿ ಔಟಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News