ಡಿ. 25: ಮರ್ಕಝ್ ಸಂದೇಶ ಯಾತ್ರೆಗೆ ಕುಂದಾಪುರದಿಂದ ಚಾಲನೆ

Update: 2017-12-22 18:50 GMT

ಮಂಗಳೂರು, ಡಿ. 22: ವಿದ್ಯಾ ಕೇಂದ್ರ ‌ಮರ್ಕಝು ಸ್ಸಖಾಫತಿ ಸ್ಸುನ್ನಿಯ್ಯ ಇದರ 40ನೆ ವಾರ್ಷಿಕ ರೂಬಿ ಜುಬಿಲೀ ಸಂದೇಶ ಪ್ರಚಾರಾರ್ಥ ಮೂರು ಜಿಲ್ಲೆಗಳಲ್ಲಿ ಮೂರು ದಿನಗಳ ಶೈಕ್ಷಣಿಕ ಜಾಗೃತಿ ಜಾಥಾ ಹಮ್ಮಿ ಕೊಳ್ಳಲಾಗಿದ್ದು, ಡಿ.25 ರಂದು ಕುಂದಾಪುರ ದಿಂದ ಪ್ರಾರಂಭ ಗೊಳ್ಳಲಿದ್ದು, ಮರ್ಕಝ್ ನಿರ್ದೇಶಕ ಮೌಲಾನಾ ಡಾ. ಅಬ್ದುಲ್‌ ಹಕೀಂ ಅಝ್ಹರಿ ನೇತೃತ್ವ ನೀಡಲಿದ್ದಾರೆ.

ಅಂದು ಬೆಳಗ್ಗೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಚಾಲನೆಗೊಳ್ಳುವ ಯಾತ್ರೆಯು ಮುಂದೆ ಉಡುಪಿ, ಹೆಜಮಾಡಿ, ಗುರುಪುರ-ಕೈಕಂಬಗಳಲ್ಲಿ ನಡೆಯುವ ಸಮಾವೇಶಗಳ  ಕೃಷ್ಣಾಪುರ ಶಾಲಾ ಮೈದಾನದಲ್ಲಿ ಸಮಾರೋಪಗೊಳ್ಳಲಿದೆ.

ಡಿ.26ರಂದು ದೇರಳಕಟ್ಟೆಯಿಂದ ಪ್ರಾರಂಭಗೊಂಡು ಅಡ್ಯಾರ್ ಕಣ್ಣೂರು, ಫರಂಗಿಪೇಟೆ, ಸಬರಬೈಲು, ಗುರುವಾಯನಕೆರೆ, ಪುತ್ತೂರು ಕೇಂದ್ರಗಳನ್ನು ದಾಟಿ ವಿಟ್ಲ ಕಂಬಳಬೆಟ್ಟುವಿನಲ್ಲಿ ಸಮಾರೋಪ ಗೊಳ್ಳಲಿದೆ.

ಮೂರನೇ ದಿನ ಬುಧವಾರ ಯಾತ್ರೆಯು ಕೊಡಗು ಜಿಲ್ಲೆಯ ಮಡಿಕೇರಿ ಪ್ರವೇಶಿಸಿ ವಿವಿಧ ಕೇಂದ್ರಗಳನ್ನು ಹಾದು ಸಾಯಂಕಾಲ ಕೊಟ್ಟಮುಡಿ ಮರ್ಕಝ್ ವಠಾರದಲ್ಲಿ ಸಮಾರೋಪ ಗೊಳ್ಳಲಿದೆ.

ಜಾಥದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸ ಡಾ. ಅಬ್ದುಲ್‌ ಹಕೀಂ ಅಝ್ಹರಿ, ಪ್ರಸಿದ್ಧ ಆಧ್ಯಾತ್ಮಿಕ ನಾಯಕ ಸಯ್ಯಿದ್ ಶಿಹಾಬುದ್ದೀನ್ ಸಖಾಫಿ ಅಲ್  ಐದರೂಸ್ ಕಿಲ್ಲೂರ್ ತಂಙಳ್,  ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸೆಂ ಝೈನೀ ಕಾಮಿಲ್ , ಕರ್ನಾಟಕ ಸಖಾಫಿ ಕೌನ್ಸಿಲ್ ಅಧ್ಯಕ್ಷ ಪಿ.ಪಿ. ಅಹ್ಮದ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಕೆ.ಕೆ.ಎಂ. ಕಾಮಿಲ್ ಸಖಾಫಿ, ಜಾಥಾ ಸಂಯೋಜಕ ಡಿ.ಕೆ. ಉಮರ್ ಸಖಾಫಿ ಕಂಬಳಬೆಟ್ಟು, ಮಲ್ಲೂರ್ ಅಶ್ರಫ್ ಸಅದಿ , ರಾಜ್ಯ ವಖ್ಫ್ ಮಂಡಳಿ ನಿರ್ದೇಶಕ ಶಾಫಿ ಸಅದಿ ಬೆಂಗಳೂರು, ಅಶ್ಅರಿಯ್ಯ ಮುಹಮ್ಮದ್ ಅಲಿ ಸಖಾಫಿ, ಕೊಳ್ತಿಗೆ ಅಬ್ದುಲ್‌ ಅಝೀಝ್ ಸಖಾಫಿ, ಅಬೂ ಸುಫ್ಯಾನ್ ಮದನಿ ಮಡಿಕೇರಿ, ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ,  ಹಾಜಿ ಮುಮ್ತಾಝ್ ಅಲಿ ಕೃಷ್ಣಾಪುರ ಮುಂತಾದವರು ಪಾಳ್ಗೊಲ್ಲಿದ್ದಾರೆ.

ಕೃಷ್ಣಾಪುರದ ಸಮಾರೋಪ ಸಮಾರಂಭದಲ್ಲಿ ಶೈಖುನಾ ಪೆರೋಡ್ ಅಬ್ದುಲ್‌ ರಹ್ಮಾನ್ ಸಖಾಫಿ, ಕಂಬಳಬೆಟ್ಟು ಹಾಗೂ ಕೊಡಗಿನ ಸಮಾರೋಪ ಸಮಾರಂಭಗಳಲ್ಲಿ ಕೂಟಂಬಾರ ಅಬ್ದುಲ್‌ ರಹ್ಮಾನ್ ದಾರಿಮಿ ಮುಖ್ಯ ಭಾಷಣ ನಡೆಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News