ಕೆರಾಡಿ: ಕೋಡಿ ಬ್ಯಾರೀಸ್ ಎನ್ನೆಸ್ಸೆಸ್ ವಿಶೇಷ ವಾರ್ಷಿಕ ಶಿಬಿರ ಉದ್ಘಾಟನೆ

Update: 2017-12-23 12:28 GMT

ಕುಂದಾಪುರ, ಡಿ.23: ಜೀವನದ ಮೌಲ್ಯಗಳು ತಿಳಿದುಕೊಳ್ಳುವ ಒಂದು ಉತ್ತಮ ವೇದಿಕೆಯೇ ಈ ವಿದ್ಯಾರ್ಥಿ ಜೀವನ. ರಾಷ್ಟ್ರೀಯ ಸೇವಾ ಯೋಜನೆ ಎಂಬ ಘಟಕ ಸಮಾಜದ ಮೌಲ್ಯಗಳನ್ನು ತಿಳಿಯಲು ಇಂದಿನ ಯುವ ಜನಾಂಗಗಳಿಗೆ ಸೂಕ್ತ ಮಾರ್ಗ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಸಮಾಜದ ಒಳಿತು ಕೆಡುಕುಗಳ ಮೌಲ್ಯಮಾಪನ ಮಾಡಿಕೊಳ್ಳಬೇಕು ಎಂದು ಕೆರಾಡಿ ಗ್ರಾಪಂ ಅಧ್ಯಕ್ಷ ಸಂತೋಷ ಕೊಠಾರಿ ಹೇಳಿದರು.

ಕೋಡಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ(ಎನ್ನೆಸ್ಸೆಸ್) ವಾರ್ಷಿಕ ಶಿಬಿರವನ್ನು ಕೆರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಶಮೀರ್ ವಹಿಸಿದ್ದರು.
 
ಮುಖ್ಯ ಅತಿಥಿಗಳಾಗಿ ಕೆರಾಡಿ ಗ್ರಾಪಂ ಸದಸ್ಯ ರಾಘವೇಂದ್ರ ಕೊಠಾರಿ, ಕೆರಾಡಿ ಸ.ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕಿ ಜಯಂತಿ ಕೆ., ಶಿಕ್ಷಕರಾದ ವಿಜಯ ಕುಮಾರ್ ಶೆಟ್ಟಿ, ಸತೀಶ್ ಕೆರಾಡಿ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಸರೋಜಾ ಶೆಡ್ತಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಸುಶೀಲಾ, ಜನಾರ್ದನ, ಶಾರದಾ ಮತ್ತಿತರರು ಉಪಸ್ಥಿತರಿದ್ದರು.

ಕವನಾ ಸ್ವಾಗತಿಸಿದರು. ಉಪನ್ಯಾಸಕ ಕಲಿಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News