×
Ad

ಭಾರತ ಕ್ಲೀನ್ ಸ್ವೀಪ್

Update: 2017-12-24 22:45 IST

ಮುಂಬೈ, ಡಿ.24: ಶ್ರೀಲಂಕಾ ವಿರುದ್ಧದ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ ಭಾರತ 5 ವಿಕೆಟ್‌ಗಳ ಜಯ ಗಳಿಸಿದ್ದು, ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದೆ.
ಇಲ್ಲಿನ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 136 ರನ್ ಮಾಡಬೇಕಿದ್ದ ಭಾರತ ಇನ್ನೂ 4 ಎಸೆತಗಳು ಬಾಕಿ ಇರುವಾಗಲೇ 5 ವಿಕೆಟ್ ನಷ್ಟದಲ್ಲಿ 139 ರನ್ ಗಳಿಸಿತು.
ಭಾರತ ತಂಡದ ನಾಯಕ ರೋಹಿತ್ ಶರ್ಮಾ 27 ರನ್, ಶ್ರೇಯಸ್ ಅಯ್ಯರ್ 30ರನ್, ಮನೀಷ್ ಪಾಂಡೆ 32 ರನ್, ದಿನೇಶ್ ಕಾರ್ತಿಕ್ ಔಟಾಗದೆ 18 ರನ್ ಮತ್ತು ಮಹೇಂದ್ರ ಸಿಂಗ್ ಧೋನಿ ಔಟಾಗದೆ 16ರನ್, ಲೋಕೇಶ್ ರಾಹುಲ್ 4ರನ್ ಮತ್ತು ಹಾರ್ದಿಕ್ ಪಾಂಡ್ಯ 4 ರನ್ ಗಳಿಸಿದರು.
ಲಂಕಾದ ಚಮೀರಾ ಮತ್ತು ಶನಕಾ ತಲಾ 2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News