ಅಶ್ಲೀಲ ಇಮೋಜಿ: ವಾಟ್ಸ್ ಆ್ಯಪ್‌ಗೆ ನೋಟಿಸ್
Update: 2017-12-26 23:07 IST
ಹೊಸದಿಲ್ಲಿ, ಡಿ. 26: ಮಧ್ಯಬೆರಳಿನ ಇಮೋಜಿಯನ್ನು 15 ದಿನಗಳ ಒಳಗೆ ತೆಗೆದು ಹಾಕುವಂತೆ ಕೋರಿ ದಿಲ್ಲಿ ನ್ಯಾಯವಾದಿಯೊಬ್ಬರು ಮಂಗಳವಾರ ವಾಟ್ಸ್ ಆ್ಯಪ್‌ಗೆ ಕಾನೂನು ನೋಟಿಸ್ ರವಾನಿಸಿದ್ದಾರೆ.
ದಿಲ್ಲಿಯ ನಗರ ನ್ಯಾಯಾಲಯದಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿರುವ ಗುರ್ಮಿತ್ ಸಿಂಗ್, ಮಧ್ಯ ಬೆರಳನ್ನು ತೋರಿಸುತ್ತಿರುವುದು ಅಕ್ರಮ ಮಾತ್ರವಲ್ಲ ಅದು ಅಶ್ಲೀಲ, ತುಚ್ಛ ಭಂಗಿ. ಇದು ಭಾರತದಲ್ಲಿ ಅಪರಾಧ ಎಂದಿದ್ದಾರೆ.
ನಿಮ್ಮ ಆ್ಯಪ್‌ನಲ್ಲಿ ಮಧ್ಯಬೆರಳಿನ ಇಮೋಜಿಯನ್ನು ಬಳಸುವಂತೆ ಉತ್ತೇಜಿಸುವುದು ಅಪರಾಧ, ತುಚ್ಛ, ಅಶ್ಲೀಲ ಭಂಗಿಯನ್ನು ನೇರವಾಗಿ ಉತ್ತೇಜಿಸಿದಂತೆ ಎಂದು ನೊಟೀಸ್ ಹೇಳಿದೆ.
ಆದುದರಿಂದ ಮಧ್ಯ ಬೆರಳಿನ ಇಮೋಜಿ ಅಥವಾ ಫೋಟೊವನ್ನು ಈ ಕಾನೂನು ನೋಟಿಸ್ ದೊರಕಿದ 15 ದಿನಗಳ ಒಳಗೆ ತೆಗೆದು ಹಾಕಬೇಕು. ಇಲ್ಲದೇ ಇದ್ದರೆ ಸಿವಿಲ್ ಅಥವಾ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.