2018ರಲ್ಲಿ ಪದಕ ಗೆಲ್ಲಲು ಫಿಟ್ನೆಸ್ಗೆ ಆದ್ಯತೆ : ಶ್ರೀಕಾಂತ್

Update: 2017-12-26 18:15 GMT

ಹೊಸದಿಲ್ಲಿ, ಡಿ.26: ಮುಂದಿನ ವರ್ಷ ಹಲವು ಟೂರ್ನಮೆಂಟ್‌ಗಳಿದ್ದು ಅನೇಕ ಪದಕಗಳನ್ನು ಗೆಲ್ಲಲು ಅವಕಾಶ ಇದೆ. ಈ ಕಾರಣದಿಂದ ದೈಹಿಕ ಕ್ಷಮತೆಗೆ ಹೆಚ್ಚಿ ನ ಆದ್ಯತೆ ನೀಡುವುದಾಗಿ ವಿಶ್ವದ ನಂ.3 ಬ್ಯಾಡ್ಮಿಂಟನ್ ಆಟಗಾರ ಕೆ.ಶ್ರೀಕಾಂತ್ ತಿಳಿಸಿದ್ದಾರೆ.

ಆಂಧ್ರ ಪ್ರದೇಶ ಸರಕಾರದ ವತಿಯಿಂದ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಶ್ರೀಕಾಂತ್‌‘‘ತಾನು ಫಿಟ್‌ನೆಸ್ ಹೊಂದಿದ್ದರೆ ಶೇ 100ರಷ್ಟು ಸಾಮರ್ಥ್ಯದ ಮೂಲಕ ಪದಕ ಗೆಲ್ಲಲು ಸಾಧ್ಯವಾಗುತ್ತದೆ. ಕಾಮನ್‌ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲಲು ಉತ್ತಮ ಅವಕಾಶ ಇದೆ ಎಂದರು. ಶ್ರೀಕಾಂತ್ 2017ರಲ್ಲಿ 4 ಬಾರಿ ಸೂಪರ್ ಸಿರೀಸ್ ಪ್ರಶಸ್ತಿ ಜಯಿಸಿದ್ದರು. ಶ್ರೀಕಾಂತ್ ಮತ್ತು ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ ಪಿ.ವಿ. ಸಿಂಧು ಅವರಿಗೆ 2017ರಲ್ಲಿ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಸರಕಾರದ ವತಿಯಿಂದ ಅಭಿನಂದಿಸಲಾಯಿತು.

ಆಂಧ್ರ ಪ್ರದೇಶದ ಜನತೆ ಮತ್ತು ಸರಕಾರ ನೀಡಿರುವ ಬೆಂಬಲಕ್ಕೆ ತಾನು ಆಭಾರಿಯಾಗಿರುವೆ ಎಂದು ಶ್ರೀಕಾಂತ್ ಹೇಳಿದ್ದಾರೆ.

ಶ್ರೀಕಾಂತ್ ಅವರು ಸಿಂಗಾಪುರ ಓಪನ್ ಮತ್ತು ಸೀನಿಯರ್ ನ್ಯಾಶನಲ್ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಸ್ಥಾನ ಗಳಿಸಿದ್ದರು.

ಸಿಂಧು ಇಂಡಿಯಾ ಮತ್ತು ಕೊರಿಯಾ ಓಪನ್‌ನಲ್ಲಿ ಚಾಂಪಿಯನ್, ವಿಶ್ವ ಚಾಂಪಿಯನ್‌ಶಿಪ್ ಮತ್ತು ಹಾಂಕಾಂಗ್ ಓಪನ್‌ನಲ್ಲಿ ಬೆಳ್ಳಿ ಗೆದ್ದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News