×
Ad

ದೋಹಾ ಓಪನ್‌ನಿಂದ ಹಿಂದೆ ಸರಿದ ಸೋಂಗ

Update: 2017-12-26 23:55 IST

ದೋಹಾ, ಡಿ.26: ಜನವರಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯ ಓಪನ್‌ಗೆ ಪೂರ್ವಭಾವಿ ಟೂರ್ನಿಯಾಗಿರುವ ದೋಹಾ ಓಪನ್ ಟೆನಿಸ್ ಟೂರ್ನಿಯಿಂದ ಫ್ರಾನ್ಸ್‌ನ ಜೋ-ವಿಲ್ಫ್ರೆಡ್ ಸೋಂಗ ಹಿಂದೆ ಸರಿದಿದ್ದಾರೆ.

32ರ ಹರೆಯದ ಸೋಂಗ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದ ದೂರ ಉಳಿದಿದ್ದಾರೆ. ಸೋಂಗ 2008ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ರನ್ನರ್ಸ್-ಅಪ್ ಪ್ರಶಸ್ತಿ ಪಡೆದಿದ್ದರು.

 2018ರ ಜ.15 ರಿಂದ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಆರಂಭವಾಗಲಿರುವ ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಮೆಂಟ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಸೋಂಗ ಆಡುವ ಸಾಧ್ಯತೆಯಿದೆ.

ವಿಶ್ವದ ನಂ.15ನೇ ಆಟಗಾರ ಸೋಂಗ 2012ರಲ್ಲಿ ದೋಹಾ ಟೂರ್ನಮೆಂಟ್‌ನ್ನು ಜಯಿಸಿದ್ದರು. ಈ ವರ್ಷದ ದೋಹಾ ಓಪನ್ ಟೂರ್ನಿಯು ಸೋಮವಾರ ಕತರ್‌ನಲ್ಲಿ ಆರಂಭವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News