ಒಡಿಶಾ: 12 ಮಾವೋವಾದಿಗಳ ಬಂಧನ

Update: 2017-12-27 13:11 GMT

 ಭುವನೇಶ್ವರ್, ಡಿ.27: ಒಡಿಶಾದ ಮಲ್ಕಾನ್‌ಗಿರಿ ಜಿಲ್ಲೆಯಲ್ಲಿ ನಡೆಸಲಾದ ಕೂಂಬಿಂಗ್ ಕಾರ್ಯಾಚರಣೆಯಲ್ಲಿ 12 ಮಾವೋವಾದಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಎರಡು ದಿನದಿಂದ ಜಿಲ್ಲೆಯ ಮಾಥಿಲಿ, ಕಾಲಿಮೇಳ ಮತ್ತು ಚಿತ್ರಕೊಂಡ ಪ್ರದೇಶದಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ಮಾವೋವಾದಿಗಳನ್ನು ಅವರ ಅಡಗುತಾಣದಿಂದ ಬಂಧಿಸಲಾಗಿದೆ ಎಂದು ಮಲ್ಕಾನ್‌ಗಿರಿ ಪೊಲೀಸ್ ಮಹಾನಿರ್ದೇಶಕ ಜಗಮೋಹನ್ ಮೀನಾ ತಿಳಿಸಿದ್ದಾರೆ.

  ಕಳೆದ ಅಕ್ಟೋಬರ್‌ನಲ್ಲಿ ಈ ಪ್ರದೇಶದಲ್ಲಿ ಹತರಾದ ದಂಬರು ನಾಯಕ್, ಮುಯಾ ಕಬಾಸಿ ಹಾಗೂ ಸಾಧು ಖೆಮುಂಡು ಅವರನ್ನು ಪೊಲೀಸ್ ಮಾಹಿತಿದಾರರೆಂಬ ಸಂದೇಹದಲ್ಲಿ ಹತ್ಯೆಮಾಡಲಾಗಿದ್ದು ಈ ಹತ್ಯೆಗಳಲ್ಲಿ ಬಂಧಿತ ಮಾವೋವಾದಿಗಳ ಕೈವಾಡ ಇರುವುದಾಗಿ ಪೊಲೀಸರು ಶಂಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News