×
Ad

ಭಾರತೀಯ ಬಳಕೆದಾರರಿಂದ ಆಧಾರ್ ದತ್ತಾಂಶ ಸಂಗ್ರಹ: ಫೇಸ್‌ಬುಕ್ ಸ್ಪಷ್ಟನೆ

Update: 2017-12-28 22:14 IST

ಪಣಜಿ, ಡಿ. 28: ತಾನು ಆಧಾರ್ ದತ್ತಾಂಶ ಸಂಗ್ರಹಿಸುತ್ತಿಲ್ಲ ಎಂದು ಸಾಮಾಜಿಕ ಮಾದ್ಯಮದ ದೈತ್ಯ ಪೇಸ್‌ಬುಕ್ ಗುರುವಾರ ಸ್ಪಷ್ಟನೆ ನೀಡಿದೆ. ಫೇಸ್ ಬುಕ್ ಖಾತೆಗೆ ಸಹಿ ಹಾಕುವಾಗ ಆಧಾರ್ ಕಾರ್ಡ್‌ನಲ್ಲಿ ಉಲ್ಲೇಖಿಸಿದಂತೆ ಹೆಸರು ದಾಖಲಿಸಬೇಕು ಎಂದು ಫೇಸ್‌ಬುಕ್ ಭಾರತದ ಹೊಸ ಬಳಕೆದಾರರಲ್ಲಿ ವಿನಂತಿಸಿತ್ತು. ಈ ಬಗ್ಗೆ ಸಂಶಯ ವ್ಯಕ್ತಪಡಿಸಿ ಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾಗಿದ್ದವು. ಈ ಹಿನ್ನೆಲೆಯಲ್ಲಿ ಪೇಸ್‌ಬುಕ್ ಈ ಸ್ಪಷ್ಟನೆ ನೀಡಿದೆ.

   ಸಾಮಾಜಿಕ ಜಾಲತಾಣದಲ್ಲಿ ನಿಜವಾದ ಹೆಸರಿನಲ್ಲಿ ಸಹಿ ಹಾಕಿ ತಮ್ಮ ಕುಟುಂಬ ಹಾಗೂ ಗೆಳೆಯರೊಂದಿಗೆ ಸಂಪರ್ಕ ಸಾಧಿಸುವುದು ಹೇಗೆ ಎಂಬುದನ್ನು ನೂತನ ಬಳಕೆದಾರರು ಅರಿತುಕೊಳ್ಳಲಿ ಎಂಬ ಉದ್ದೇಶದಿಂದ ಈ ಸಣ್ಣ ಪರೀಕ್ಷೆ ಮಾಡಲಾಗುತ್ತಿದೆ ಎಂದು ಫೇಸ್‌ಬುಕ್ ಹೇಳಿದೆ.

 ಫೇಸ್‌ಬುಕ್ ಜನರಿಂದ ಆಧಾರ್ ಕಾರ್ಡ್‌ನ ಮಾಹಿತಿ ಕೋರುತ್ತಿದೆ. ಇದು ಸರಿಯಲ್ಲ ಎಂದು ಈ ಪರೀಕ್ಷೆ ಬಗ್ಗೆ ಕೆಲವರು ವ್ಯಾಖ್ಯಾನಿಸಿದ್ದಾರೆ ಎಂದು ಫೇಸ್‌ಬುಕ್ ಹೇಳಿದೆ. ಈ ಪರೀಕ್ಷೆ ಮುಗಿದಿದೆ. ಆಧಾರ್ ಕಾರ್ಡ್‌ನಲ್ಲಿರುವ ಹೆಸರು ಬಳಕೆ ಮಾಡುವುದು ಕುಟುಂಬ ಹಾಗೂ ಗೆಳೆಯರನ್ನು ಗುರುತಿಸಲು ನೆರವಾಗುತ್ತದೆ ಎಂಬುದನ್ನು ವಿವರಿಸಲು ಖಾತೆ ಸಹಿ ಪುಟದಲ್ಲಿ ಹೆಚ್ಚುವರಿ ಭಾಷೆಗಳನ್ನು ಸೇರಿಸಲಾಗಿದೆ ಎಂದು ಫೇಸ್‌ಬುಕ್ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News