×
Ad

ರಾಜಸ್ಥಾನ: 2 ಲೋಕಸಭಾ, 1 ವಿಧಾನಸಭಾ ಸ್ಥಾನಕ್ಕೆ ಜನವರಿ 29ರಂದು ಚುನಾವಣೆ

Update: 2017-12-28 22:29 IST

ರಾಜಸ್ಥಾನ, ಡಿ.28: ರಾಜಸ್ಥಾನದ 2 ಲೋಕಸಭಾ ಸ್ಥಾನಗಳಿಗೆ ಹಾಗು ಒಂದು ವಿಧಾನಸಭಾ ಸ್ಥಾನಕ್ಕೆ ಜನವರಿ 29ರಂದು ಚುನಾವಣೆ ನಡೆಯಲಿದೆ ಚುನಾವಣಾ ಆಯೋಗ ಘೋಷಿಸಿದೆ. ಫೆಬ್ರವರಿ 1ರಂದು ಮತ ಎಣಿಕೆ ನಡೆಯಲಿದೆ.

ಆಲ್ವಾರ್ ಹಾಗು ಅಜ್ಮೀರ್ ನಲ್ಲಿ ಲೋಕಸಭಾ ಸೀಟುಗಳಿಗೆ ಹಾಗು ಮಂಡಲ್ ಗರ್ ನ ಒಂದು ಅಸೆಂಬ್ಲಿ ಸೀಟಿಗೆ ನಡೆಯಲಿರುವ ಚುನಾವಣೆ ಇದಾಗಿದೆ.

ನಾಪಮತ್ರ ತುಂಬಲು ಜನವರಿ 10 ಕೊನೆಯ ದಿನಾಂಕವಾಗಿದೆ. 11ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, 15ರಂದು ನಾಮಪತ್ರ ಹಿಂದೆಗೆದುಕೊಳ್ಳಲು ಕೊನೆಯ ದಿನಾಂಕವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News