ಉದ್ಯೋಗ ಮೂಲಭೂತ ಹಕ್ಕು ಮಸೂದೆ ತಿರಸ್ಕೃತ

Update: 2017-12-29 17:13 GMT

ಹೊಸದಿಲ್ಲಿ ಡಿ. 29: ಹದಿನೆಂಟು ವರ್ಷ ಮೇಲ್ಪಟ್ಟ ಪ್ರತಿ ನಾಗರಿಕನಿಗೆ ಉದ್ಯೋಗ ಖಾತರಿ ಅಥವಾ ನಿರುದ್ಯೋಗ ವೇತನ ನೀಡುವಂತೆ ಕೋರಿ ಮಂಡಿಸಲಾದ ಖಾಸಗಿ ಮಸೂದೆ ಸದನದಲ್ಲಿ ಕೇವಲ ಮೂರು ಮತಗಳಿಂದ ತಿರಸ್ಕೃತಗೊಂಡಿದೆ.

ಸಮಾಜವಾದಿ ಪಕ್ಷದ ವಿಶಾಂಭರ್ ಪ್ರಸಾದ್ ನಿಶಾದ್ ತನ್ನ ಖಾಸಗಿ ಮಸೂದೆ ಹಿಂದೆಗೆಯಲು ಎರಡು ಬಾರಿ ಕೂಡ ನಿರಾಕರಿಸಿದ ಹಿನ್ನೆಲೆಯಲ್ಲಿ ಮತ ವಿಭಜನೆ ಅಗತ್ಯವಾಯಿತು. ಮತದಾನದಲ್ಲಿ 21-18 ಮತಗಳ ಮೂಲಕ ಈ ಖಾಸಗಿ ಮಸೂದೆ ತಿರಸ್ಕೃತಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News