×
Ad

ಪಿಒಕೆಯಲ್ಲಿ 1.51 ಬಿಲಿಯ ಡಾಲರ್ ಮೌಲ್ಯದ ಜಲವಿದ್ಯುತ್ ಸ್ಥಾವರ ಸ್ಥಾಪನೆಗೆ ಪಾಕ್ ನಿರ್ಧಾರ

Update: 2017-12-30 22:10 IST

ಇಸ್ಲಾಮಾಬಾದ್,ಡಿ.30: ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿ 700 ಮೆಗಾವ್ಯಾಟ್‌ಗೂ ಅಧಿಕ ಸಾಮರ್ಥ್ಯದ ನೂತನ ಜಲವಿದ್ಯುತ್ ಸ್ಥಾವರವನ್ನು ಸ್ಥಾಪಿಸಲು ಪಾಕಿಸ್ತಾನವು ಶನಿವಾರ ನಿರ್ಧರಿಸಿದೆ. 2022ರೊಳಗೆ ವಿದೇಶಿ ಆರ್ಥಿಕ ನೆರವಿನೊಂದಿಗೆ 1.51 ಶತಕೋಟಿ ಡಾಲರ್ ಅಂದಾಜು ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಅದು ನಿರ್ಧರಿಸಿದೆ.

ಪಾಕ್ ಆಕ್ರಮಿತ ಕಾಶ್ಮೀರದ ಸುಧಾನೊಟಿ ಜಿಲ್ಲೆಯಲ್ಲಿ ಹರಿಯುವ ಝೀಲಂ ನದಿಗೆ ನಿರ್ಮಿಸಲಾಗುವ ಈ ಯೋಜನೆಗೆ ‘ಆಝಾದ್ ಪಟ್ಟಾನ್ ಜಲವಿದ್ಯುತ್ ಯೋಜನೆ’ (ಎಪಿಎಚ್‌ಪಿ) ಎಂದು ಹೆಸರಿಡಲಾಗಿದೆ.

 2022ರೊಳಗೆ ಈ ಜಲವಿದ್ಯುತ್ ಯೋಜನೆ ಪೂರ್ಣಗೊಳ್ಳಲಿದೆಯೆಂದು ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.

ಪಾಕಿಸ್ತಾನದಲ್ಲಿ ಜಲವಿದ್ಯುತ್ ಉತ್ಪಾದನೆಗೆ ಹೇರಳ ಅವಕಾಶಗಳಿದ್ದು, ಈವರೆಗೆ ಕೇವಲ ಶೇ.12ರಷ್ಟು ಜಲವಿದ್ಯುತ್ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸಲಾಗಿದೆ ಅಥವಾ ಕಾರ್ಯಗತಗೊಳಿಸಲಾಗಿದೆ ಎಂದು ಹೇಳಿಕೆಯು ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News