×
Ad

ಕಾಮನ್‌ವೆಲ್ತ್ ಗೇಮ್ಸ್ ತಂಡಕ್ಕೆ ಸಾಕ್ಷಿ, ಬಬಿತಾ ಆಯ್ಕೆ

Update: 2017-12-30 23:45 IST

 ಲಕ್ನೋ, ಡಿ.30: ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಕುಸ್ತಿತಾರೆ ಸಾಕ್ಷಿ ಮಲಿಕ್ ಮುಂದಿನ ವರ್ಷ ಆಸ್ಟ್ರೇಲಿಯದ ಗೋಲ್ ್ಡ ಕೋಸ್ಟ್‌ನಲ್ಲಿ ನಡೆಯಲಲಿರುವ ಕಾಮನ್‌ವೆಲ್ತ್ ಗೇಮ್ಸ್ ಗೆ ಭಾರತದ ಮಹಿಳಾ ಕುಸ್ತಿ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಶನಿವಾರ ಲಕ್ನೋದ ಕ್ರೀಡಾ ಪ್ರಾಧಿಕಾರ ಕೇಂದ್ರದಲ್ಲಿ ಆರು ತೂಕ ವಿಭಾಗಗಳಲ್ಲಿ ಆಯ್ಕೆ ಟ್ರಯಲ್ಸ್ ನಡೆದಿದೆ. ಸಾಕ್ಷಿ(62ಕೆ.ಜಿ.) ಅವರಲ್ಲದೆ ಇತರ ಕುಸ್ತಿತಾರೆಯರಾದ ವಿನೇಶ್ ಫೋಗಟ್(50 ಕೆ.ಜಿ.), ಬಬಿತಾ ಕುಮಾರಿ(54 ಕೆ.ಜಿ.), ಪೂಜಾ ಧಾಂಡ(57 ಕೆ.ಜಿ.), ದಿವ್ಯಾ ಕರಣ್(68 ಕೆ.ಜಿ.) ಹಾಗೂ ಕಿರಣ್(76 ಕೆ.ಜಿ.) 2018ರ ಕಾಮನ್‌ವೆಲ್ತ್ ಗೇಮ್ಸ್‌ಗೆ ಆಯ್ಕೆಯಾಗಿದ್ದಾರೆ. ಆರು ಫ್ರೀಸ್ಟೈಲ್ ಕುಸ್ತಿತಾರೆಯರು 2018ರಲ್ಲಿ ಕಿರ್ಗಿಸ್ತಾನದಲ್ಲಿ ನಡೆಯಲಿರುವ ಸೀನಿಯರ್ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News