×
Ad

ಉಪರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಮಾಜಿ ‘ರಾ’ ಮುಖ್ಯಸ್ಥ ಖನ್ನಾ ನೇಮಕ

Update: 2018-01-02 22:47 IST

ಹೊಸದಿಲ್ಲಿ, ಜ.3: ಮಾಜಿ ‘ರಾ’ ಮುಖ್ಯಸ್ಥ ರಾಜೇಂದ್ರ ಖನ್ನಾರನ್ನು ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ ನೇಮಿಸಲಾಗಿದೆ.

1978ರ ಬ್ಯಾಚ್‌ನ ಅಧಿಕಾರಿಯಾಗಿರುವ ಖನ್ನಾ ಗುಪ್ತಚಾರ ಇಲಾಖೆ ‘ರಾ’ ಪರ ಹಲವಾರು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು ಪಾಕ್ ವಿಷಯದಲ್ಲಿ ಪರಿಣತರಾಗಿದ್ದಾರೆ. ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‌ಗೆ ಸಹಾಯಕರಾಗಿರುತ್ತಾರೆ.

ಖನ್ನಾರನ್ನು ಉಪಭದ್ರತಾ ಸಲಹೆಗಾರರನ್ನಾಗಿ ನೇಮಿಸಲಾಗಿದ್ದು ಮುಂದಿನ ಆದೇಶದವರೆಗೆ ಅವರು ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ಸಂಪುಟದ ನೇಮಕ ಸಮಿತಿ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ. ಖನ್ನಾ 2014ರಿಂದ 2016ರವರೆಗೆ ‘ರಾ’ದಲ್ಲಿ ಕರ್ತವ್ಯ ನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News