×
Ad

ಭಾರತ ವಿರುದ್ಧ ಮೊದಲ ಟೆಸ್ಟ್‌ಗೆ ಸ್ಟೇಯ್ನ್ ಅನುಮಾನ

Update: 2018-01-02 23:29 IST

ಕೇಪ್‌ಟೌನ್, ಜ.2: ವಿಶ್ವದ ಮಾಜಿ ನಂ.1 ಬೌಲರ್ ಡೇಲ್ ಸ್ಟೇಯ್ನ ದಕ್ಷಿಣ ಆಫ್ರಿಕ ತಂಡದ ಆಡುವ 11ರ ಬಳಗಕ್ಕೆ ವಾಪಸಾಗುವುದು ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ. ಇನ್ನೂ ಸಂಪೂರ್ಣ ಫಿಟ್‌ನೆಸ್ ಪಡೆಯದ ಅವರು ಜ.5 ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್‌ನಲ್ಲಿ ಆಡುವುದು ಅನುಮಾನ.

34ರ ಹರೆಯದ ಸ್ಟೇಯ್ನ ಕಳೆದ ವಾರ ಪೋರ್ಟ್ ಎಲಿಜಬೆತ್‌ನಲ್ಲಿ ನಡೆದ ಝಿಂಬಾಬ್ವೆ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ತಂಡಕ್ಕೆ ವಾಪಸಾಗುವ ಯೋಜನೆ ಹಾಕಿಕೊಂಡಿದ್ದರು. ಆದರೆ, ಅನಾರೋಗ್ಯದಿಂದಾಗಿ ಆ ಪಂದ್ಯದಿಂದ ಹಿಂದೆ ಸರಿದಿದ್ದರು. ಸ್ಟೇಯ್ನೆ ಭಾರತ ವಿರುದ್ಧದ ಮೊದಲ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ 417 ವಿಕೆಟ್‌ಗಳನ್ನು ಕಬಳಿಸಿರುವ ಸ್ಟೇಯ್ನಿ ದಕ್ಷಿಣ ಆಫ್ರಿಕದ ಪರ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಲು ಇನ್ನು ಕೇವಲ 4 ವಿಕೆಟ್ ಅಗತ್ಯವಿದೆ.

 ಸ್ಟೇಯ್ನ ಭುಜನೋವಿನ ಸಮಸ್ಯೆ ಎದುರಿಸುತ್ತಿದ್ದು ಟೆಸ್ಟ್ ಪಂದ್ಯ ಆಡದೇ 14 ತಿಂಗಳು ಉರುಳಿದೆ. ಸ್ಟೇಯ್ನ್‌ಗೆ 2015ರ ಡಿಸೆಂಬರ್‌ನಲ್ಲಿ ಮೊದಲ ಬಾರಿ ಭುಜನೋವು ಕಾಣಿಸಿಕೊಂಡಿತ್ತು. 2016ರ ನವೆಂಬರ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಪಂದ್ಯದ ವೇಳೆ ನೋವು ಮರುಕಳಿಸಿತು. ಆಸ್ಟ್ರೇಲಿಯ ಪ್ರವಾಸ ಮೊಟಕುಗೊಳಿಸಿ ಕೇಪ್‌ಟೌನ್‌ಗೆ ವಾಪಸಾದ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News