×
Ad

ಜ. 13 ರಿಂದ ಅಂಡರ್-19 ಕ್ರಿಕೆಟ್ ವಿಶ್ವಕಪ್ ಆರಂಭ

Update: 2018-01-02 23:39 IST

ಹೊಸದಿಲ್ಲಿ, ಜ.2: ಐಸಿಸಿ ಅಂಡರ್-19 ವಿಶ್ವಕಪ್ ಈ ಬಾರಿ ನ್ಯೂಝಿಲೆಂಡ್‌ನಲ್ಲಿ ನಡೆಯಲಿದ್ದು, ವಿಶ್ವದ 16 ತಂಡಗಳು ರೌಂಡ್ ರಾಬಿನ್ ಹಾಗೂ ನಾಕೌಟ್ ಮಾದರಿಯಲ್ಲಿ ಪರಸ್ಪರ ಸೆಣಸಾಡಲಿವೆ.

ಜ.13 ರಿಂದ ಆರಂಭವಾಗಲಿರುವ ಟೂರ್ನಿ ಫೆ.3 ರಂದು ಕೊನೆಗೊಳ್ಳಲಿದೆ. ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದ ನಡುವೆ ಟೂರ್ನಿಯ ಮೊದಲ ಪಂದ್ಯ ನಡೆಯಲಿದೆ. ಟೂರ್ನಿಯ ಮೊದಲ ಪಂದ್ಯ ಒಟ್ಟು 4 ಪಂದ್ಯಗಳು ನಡೆಯುತ್ತವೆ.

ಭಾರತ ಜ.14 ರಂದು ಆಸ್ಟ್ರೇಲಿಯವನ್ನು ಎದುರಿಸುವ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಭಾರತ ‘ಬಿ’ ಗುಂಪಿನಲ್ಲಿ ಝಿಂಬಾಬ್ವೆ, ಪಪುವಾ ನ್ಯೂ ಗಿನಿಯಾ ಹಾಗೂ ಆಸ್ಟ್ರೇಲಿಯ ತಂಡಗಳೊಂದಿಗೆ ಸ್ಥಾನ ಪಡೆದಿದೆ.

ಭಾರತದ ಲೀಗ್ ಪಂದ್ಯಗಳು

►ಜ.14: ಭಾರತ-ಆಸ್ಟ್ರೇಲಿಯ

►ಜ.16: ಭಾರತ-ಪಪುವಾ ನ್ಯೂ ಗಿನಿಯಾ

►ಜ.19: ಭಾರತ-ಝಿಂಬಾಬ್ವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News