×
Ad

ಭಾರತದ ದಕ್ಷಿಣ ಆಫ್ರಿಕ ಪ್ರವಾಸ ಸಂಪೂರ್ಣ ವೇಳಾಪಟ್ಟಿ ಪ್ರಕಟ

Update: 2018-01-02 23:50 IST

ಕೇಪ್‌ಟೌನ್, ಜ.2: ಟೀಮ್ ಇಂಡಿಯಾ ಜ.5 ರಂದು ಕೇಪ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಆಡುವ ಮೂಲಕ ಆಫ್ರಿಕ ಪ್ರವಾಸವನ್ನು ಆರಂಭಿಸಲಿದೆ.

ವಿರಾಟ್ ಕೊಹ್ಲಿ ಪಡೆ ದಕ್ಷಿಣ ಆಫ್ರಿಕದ ವಿರುದ್ಧ 3 ಟೆಸ್ಟ್, 6 ಏಕದಿನ ಹಾಗೂ 3 ಟ್ವೆಂಟಿ-20 ಪಂದ್ಯಗಳನ್ನು ಆಡಲಿದೆ. ಸ್ವದೇಶದಲ್ಲಿ ಶ್ರೀಲಂಕಾ ವಿರುದ್ಧ ಆಡಿರುವ ಎಲ್ಲ ಮೂರು ಪ್ರಕಾರದ ಪಂದ್ಯಗಳಲ್ಲಿ ಜಯ ಸಾಧಿಸಿರುವ ಭಾರತ ಪ್ರಸ್ತುತ ಭರ್ಜರಿ ಫಾರ್ಮ್‌ನಲ್ಲಿದೆ.

 ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮ ಲಂಕಾ ವಿರುದ್ಧ ಭಾರತ ತಂಡದ ನಾಯಕತ್ವವಹಿಸಿಕೊಂಡಿದ್ದರು. ಭಾರತ ಟೆಸ್ಟ್ ಸರಣಿಯನ್ನು 1-0, ಏಕದಿನ ಸರಣಿಯನ್ನು 2-1 ಹಾಗೂ ಟ್ವೆಂಟಿ-20 ಸರಣಿಯನ್ನು 3-0 ಅಂತರದಿಂದ ಕ್ಲೀನ್‌ಸ್ವೀಪ್ ಸಾಧಿಸಿತ್ತು.

 ಮತ್ತೊಂದೆಡೆ, ದಕ್ಷಿಣ ಆಫ್ರಿಕ ತಂಡ ಝಿಂಬಾಬ್ವೆ ವಿರುದ್ಧ ಮೊದಲ ಬಾರಿ ನಡೆದ ಚತುರ್ದಿನ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 120 ರನ್‌ಗಳಿಂದ ಜಯ ಸಾಧಿಸಿತ್ತು. ಭಾರತ-ದಕ್ಷಿಣ ಆಫ್ರಿಕ ಸರಣಿಯ ಸಂಪೂರ್ಣ ವೇಳಾಪಟ್ಟಿ ಇಂತಿದೆ.

ಟೆಸ್ಟ್ ಸರಣಿ

►ಜ.5-9: ಮೊದಲ ಟೆಸ್ಟ್, ನ್ಯೂಲ್ಯಾಂಡ್ಸ್, ಕೇಪ್‌ಟೌನ್

►ಜ.13-17: ಎರಡನೇ ಟೆಸ್ಟ್, ಸೆಂಚೂರಿಯನ್.

►ಜ.24-28: 3ನೇ ಟೆಸ್ಟ್, ವಾಂಡರರ್ಸ್ ಸ್ಟೇಡಿಯಂ, ಜೋಹಾನ್ಸ್‌ಬರ್ಗ್.

ಏಕದಿನ ಸರಣಿ

►ಫೆ.1: ಮೊದಲ ಪಂದ್ಯ, ಕಿಂಗ್ಸ್‌ಮೀಡ್(ಹಗಲು/ರಾತ್ರಿ)

►ಫೆ.4: ಎರಡನೇ ಪಂದ್ಯ, ಸೆಂಚೂರಿಯನ್.

►ಫೆ.7: ಮೂರನೇ ಪಂದ್ಯ, ನ್ಯೂಲ್ಯಾಂಡ್ಸ್ ಕೇಪ್‌ಟೌನ್(ಹಗಲು/ರಾತ್ರಿ)

►ಫೆ.10: ನಾಲ್ಕನೇ ಪಂದ್ಯ, ವಾಂಡರರ್ಸ್‌, ಜೋಹಾನ್ಸ್‌ಬರ್ಗ್(ಹಗಲು/ರಾತ್ರಿ)

►ಫೆ.13: ಐದನೇ ಪಂದ್ಯ, ಸೈಂಟ್‌ಜಾರ್ಜ್ ಪಾರ್ಕ್, ಪೋರ್ಟ್ ಎಲಿಜಬೆತ್(ಹಗಲು/ರಾತ್ರಿ)

►ಫೆ.16: ಆರನೇ ಪಂದ್ಯ, ಸೆಂಚೂರಿಯನ್(ಹಗಲು/ರಾತ್ರಿ)

ಟ್ವೆಂಟಿ-20 ಸರಣಿ

►ಫೆ.18: ಮೊದಲ ಟ್ವೆಂಟಿ-20, ಜೋಹಾನ್ಸ್‌ಬರ್ಗ್

►ಫೆ.21: ಎರಡನೇ ಟ್ವೆಂಟಿ-20, ಸೆಂಚೂರಿಯನ್(ಹಗಲು/ರಾತ್ರಿ)

►ಫೆ.24: ಮೂರನೇ ಟ್ವೆಂಟಿ-20, ಕೇಪ್‌ಟೌನ್(ಹಗಲು/ರಾತ್ರಿ)

ತಂಡಗಳು

►ಭಾರತದ ಟೆಸ್ಟ್ ತಂಡ : ವಿರಾಟ್ ಕೊಹ್ಲಿ(ನಾಯಕ), ಮುರಳಿ ವಿಜಯ್, ಶಿಖರ್ ಧವನ್, ಲೋಕೇಶ್ ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ರೋಹಿತ್ ಶರ್ಮ, ಹಾರ್ದಿಕ್ ಪಾಂಡ್ಯ, ವೃದ್ದಿಮಾನ್ ಸಹಾ, ಆರ್.ಅಶ್ವಿನ್, ರವೀಂದ್ರ ಜಡೇಜ, ಭುವನೇಶ್ವರ ಕುಮಾರ, ಮುಹಮ್ಮದ್ ಶಮಿ, ಇಶಾಂತ್ ಶರ್ಮ, ಉಮೇಶ್ ಯಾದವ್, ಪಾರ್ಥಿವ್ ಪಟೇಲ್, ಜಸ್‌ಪ್ರಿತ್ ಬುಮ್ರಾ.

►ಭಾರತ ಏಕದಿನ ತಂಡ: ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮ, ಶಿಖರ ಧವನ್, ಅಜಿಂಕ್ಯ ರಹಾನೆ, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಕೇದಾರ್ ಜಾಧವ್, ದಿನೇಶ್ ಕಾರ್ತಿಕ್, ಎಂ.ಎಸ್. ಧೋನಿ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್‌ದೀಪ್ ಯಾದವ್, ಯಜುವೇಂದ್ರ ಚಹಾಲ್, ಭುವನೇಶ್ವರ ಕುಮಾರ್, ಜಸ್‌ಪ್ರಿತ್ ಬುಮ್ರಾ, ಮುಹಮ್ಮದ್ ಶಮಿ, ಶಾರ್ದೂಲ್ ಠಾಕೂರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News