ಕಾಟಿಪಳ್ಳ ರುದ್ರಭೂಮಿಯಲ್ಲಿ ನೆರವೇರಿದ ದೀಪಕ್ ಅಂತ್ಯಕ್ರಿಯೆ

Update: 2018-01-04 08:59 GMT

ಮಂಗಳೂರು, ಜ.4: ನಿನ್ನೆ ಮಧ್ಯಾಹ್ನ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ದೀಪಕ್ ರಾವ್ ಅವರ ಮೃತದೇಹದ ಅಂತ್ಯಕ್ರಿಯೆ
ಕಾಟಿಪಳ್ಳದ ಜನತಾ ಕಾಲನಿಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.

ಬೆಳಗ್ಗೆಯಿಂದ ಸುಮಾರು 12 ಗಂಟೆಯವರೆಗೆ ವ್ಯಕ್ತವಾದ ಪ್ರತಿಭಟನೆಯು ಬಳಿಕ ಜಿಲ್ಲಾಧಿಕಾರಿಯ ಮಧ್ಯಸ್ಥಿಕೆಯಲ್ಲಿ ಸಮಸ್ಯೆ ಬಗೆಹರಿದಿತ್ತು. ಬಳಿಕ ಕಾಟಿಪಳ್ಳದ ಮನೆಯಿಂದ ಸುಮಾರು ಮುಕ್ಕಾಲು ಕಿ.ಮೀ. ದೂರದಲ್ಲಿರುವ ರುದ್ರಭೂಮಿಯವರೆಗೆ ದೀಪಕ್ ಅವರ ಮೃತದೇಹದ ಮೆರವಣಿಗೆ ನಡೆಸಲು ಜಿಲ್ಲಾಧಿಕಾರಿ ಸಸಿಕಾಂತ್ ಸೆಂತಿಲ್ ಅನುಮತಿ ನೀಡಿದ್ದರು.

ಅದರಂತೆ ಬಿಗಿ ಪೊಲೀಸ್ ಬಂದೋಬಸ್ತಿನೊಂದಿಗೆ ಆರಂಭಗೊಂಡ ಮೃತದೇಹದ ಮೆರವಣಿಗೆಯು ಸುಮಾರು 6 ಕಿ.ಮೀ. ದೂರದವರೆಗೆ ಸಾಗಿ ಅಪರಾಹ್ನ 1:45ರಸುಮಾರಿಗೆ ಕಾಟಿಪಳ್ಳ ಜನತಾ ಕಾಲನಿಯಲ್ಲಿರುವ ಹಿಂದೂ ರುದ್ರಭೂಮಿ ತಲುಪಿತು. ಅಂತಿಮ ಸಂಸ್ಕಾರದ ವಿಧಿವಿಧಾನಗಳು ನಡೆದು ಕ್ಷತ್ರಿಯ ಸಂಪ್ರದಾಯದಂತೆ ಅಂತ್ಯಸಂಸ್ಕಾರ 2:20ರ ಸುಮಾರಿಗೆ ನೆರವೇರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News