ಉಡುಪಿ: ಉಚಿತ ಶೌಚಾಲಯದಲ್ಲಿ ಸ್ವಚ್ಛತಾ ಕಾಣಿಕೆ ಹುಂಡಿ!

Update: 2018-01-04 10:31 GMT

ಉಡುಪಿ ಶ್ರೀಕೃಷ್ಣ ಮಠ ರಾಜಾಂಗಣದ ಸಮೀಪದ ಯಾತ್ರಿಕರ ವಾಹನ ನಿಲುಗಡೆ ಸ್ಥಳದಲ್ಲಿ ಉಚಿತ ಸೇವೆ ಒದಗಿಸುವ ಸಾರ್ವಜನಿಕ ಶೌಚಾಲಯದಲ್ಲಿ ಕೆಲ ದಿನಗಳ ಹಿಂದೆ ಸ್ವಚ್ಛತಾ ಹುಂಡಿಯೊಂದು ಪ್ರತ್ಯಕ್ಷವಾಗಿದೆ.

ಉಚಿತವಾಗಿರುವ ಈ ಶೌಚಾಲಯದಲ್ಲಿ ಸಾರ್ವಜನಿಕರು ಹಣ ನೀಡ ಬಾರದೆಂಬ ವಿನಂತಿಯ ಬರಹ ಸೂಚನಾ ಫಲಕ ಇದೆ. ಆದರೆ ಕೆಲವು ದಿನಗಳಿಂದ ಇಲ್ಲಿ ಸ್ವಚ್ಚತಾ ಹುಂಡಿಯನ್ನು ಅಳವಡಿಸಲಾಗಿದೆ. ಶೌಚಾಲಯದಲ್ಲಿ ಕಾಣ ಸಿಕ್ಕಿರುವ ಹುಂಡಿ ನೋಡಿ ಯಾತ್ರಾರ್ಥಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News