×
Ad

ಬ್ರಿಸ್ಬೇನ್ ಓಪನ್: ಗಾಯಾಳು ಕೊಂಟಾ ಕ್ವಾರ್ಟರ್ ಫೈನಲ್‌ನಿಂದ ಹೊರಕ್ಕೆ

Update: 2018-01-04 23:47 IST

ಬ್ರಿಸ್ಬೇನ್, ಜ.4: ಬ್ರಿಟನ್‌ನ ನಂ.1 ಆಟಗಾರ್ತಿ ಜೋಹಾನ್ ಕೊಂಟಾ ಅವರು ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಕ್ವಾರ್ಟರ್ ಫೈನಲ್‌ನಲ್ಲಿ ಗಾಯಗೊಂಡು ನಿವೃತ್ತರಾಗಿದ್ದಾರೆ.

ಬ್ರಿಸ್ಬೇನ್ ಇಂಟರ್‌ನ್ಯಾಶನಲ್ ಕ್ವಾರ್ಟರ್ ಫೈನಲ್‌ನಲ್ಲಿ ಉಕ್ರೇನ್‌ನ ಎಲಿನಾ ಸ್ವಿಟೋಲಿನಾ ವಿರುದ್ಧ ಆಡುತ್ತಿದ್ದಾಗ ಕೊಂಟಾ ಅವರು ಗಾಯಗೊಂಡು ನಿವೃತ್ತರಾದರು.

 ಕೊಂಟಾ ಅವರು ಮೂರನೇ ಸೆಟ್‌ನಲ್ಲಿ ಗಾಯಗೊಂಡು ಕಣದಿಂದ ನಿರ್ಗಮಿಸಿದರು. ಇದರೊಂದಿಗೆ ಎದುರಾಳಿ ಎಲಿನಾಗೆ ಮುಂದಿನ ಹಂತಕ್ಕೆ ತೇರ್ಗಡೆಯಾದರು.

ಕೊಂಟಾ ಪಂದ್ಯದ ಅರ್ಧದಲ್ಲಿ ನಿವೃತ್ತರಾಗುವುದರೊಂದಿಗೆ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿದರು. ಕೊಂಟಾ ಅವರು ಗಾಯಗೊಂಡು ನಿರ್ಗಮಿಸುವ ಮೂಲಕ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡುವುದಕ್ಕೆ ಅಡ್ಡಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News