×
Ad

ಮರಿಯಾ ಶರಪೋವಾ ಸೆಮಿಫೈನಲ್‌ಗೆ

Update: 2018-01-04 23:49 IST

ಶೆಂಝೆನ್, ಜ.4: ಮಾಜಿ ನಂ.1 ಆಟಗಾರ್ತಿ ರಷ್ಯಾದ ಮರಿಯಾ ಶರಪೋವಾ ಅವರು ಶೆಂಝೆನ್ ಓಪನ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಸೆಮಿಫೈನಲ್ ತಲುಪಿದ್ದಾರೆ.

ಗುರುವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಶರಪೋವಾ ಅವರು ಕಝಕಿಸ್ತಾನದ ಝರಿನಾ ದಿಯಾಸ್ ವಿರುದ್ಧ 6-3, 6-3 ನೇರ ಸೆಟ್‌ಗಳಿಂದ ಜಯ ಗಳಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟರು.

ಡೋಪಿಂಗ್ ಆರೋಪದಲ್ಲಿ ಟೆನಿಸ್‌ನಿಂದ ಒಂದು ವರ್ಷ ನಿಷೇಧಕ್ಕೊಳಗಾಗಿದ್ದ ಶರಪೋವಾ ಅವರು ಪ್ರಸ್ತುತ ಟೆನಿಸ್ ರ್ಯಾಂಕಿಂಗ್‌ನಲ್ಲಿ 59ನೇ ಸ್ಥಾನ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News