ಉತ್ತರಪ್ರದೇಶದಲ್ಲಿ ತೀವ್ರ ಚಳಿ: 70ಕ್ಕೂ ಅಧಿಕ ಜನರು ಬಲಿ
Update: 2018-01-06 21:39 IST
ಲಕ್ನೋ, ಜ. 6: ಉತ್ತರಪ್ರದೇಶದ ಹೆಚ್ಚಿನ ಭಾಗಗಳಲ್ಲಿ ಶನಿವಾರ ವಿಪರೀತ ಚಳಿ ಆವರಿಸಿದ್ದು, ರಾತ್ರಿ ಆಶ್ರಯ ಹಾಗೂ ಸೌಲಭ್ಯಗಳ ಕೊರತೆಯಿಂದ 70ಕ್ಕೂ ಅಧಿಕ ಮನೆರಹಿತ ಹಾಗೂ ಬಡ ಜನರು ಸಾವನ್ನಪ್ಪಿದ್ದಾರೆ.
ಪೂರ್ವಾಂಚಲ್‌ನಲ್ಲಿ 22 ಸಾವು ವರದಿಯಾಗಿದೆ. ಬ್ರಿಜಿ ಹಾಗೂ ಬರೈಲಿ ವಿಭಾಗದಲ್ಲಿ ತಲಾ 3; ಅಲಹಾಬಾದ್ ವಿಭಾಗದಲ್ಲಿ 11 ಹಾಗೂ ಬುಂಧೇಲಖಂಡ ವಲಯದಲ್ಲಿ 28 ಜನರು ಚಳಿಯಿಂದ ಮೃತಪಟ್ಟಿದ್ದಾರೆ. ಬಾರಾಬಂಕಿ ಜಿಲ್ಲೆಯ ರಾಮ್ ಕಿಶೋರ್ ರಾವತ್ (40) ಹಾಗೂ ಮಹೇಶ್ (35) ತೀವ್ರ ಚಳಿಯಿಂದ ಮೃತಪಟ್ಟಿದ್ದಾರೆ. ಫರೀದಾಬಾದ್‌ನ ಹರ್‌ಚಂದ್‌ಪುರದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಅಂಬೇಡ್ಕರ್ ನಗರ, ರಾಯ್ ಬರೇಲಿಯ ಮುಖ್ದೂಮ್‌ಪುರ ಹಾಗೂ ಊಂಚಾಹಾರ್‌ನಲ್ಲಿ ತಲಾ 1 ಶಿಶು ಮೃತಪಟ್ಟಿದೆ ಎನ್ನಲಾಗಿದೆ.